ಧೋನಿಯಂತೆ ಡಿಆರ್ ಎಸ್ ವಿಚಾರದಲ್ಲಿ ಕೊಹ್ಲಿಯನ್ನೇ ಸುಮ್ಮನಾಗಿಸಿದ ರಿಷಬ್ ಪಂತ್!

Webdunia
ಭಾನುವಾರ, 25 ನವೆಂಬರ್ 2018 (09:41 IST)
ಮೆಲ್ಬೋರ್ನ್: ಡಿಆರ್ ಎಸ್ ನಿಯಮವನ್ನು ಅಳವಡಿಸಬೇಕೋ ಬೇಡವೋ ಎಂಬ ವಿಚಾರದಲ್ಲಿ ಧೋನಿಯಷ್ಟು ಕರಾರುವಾಕ್ ಆಗಿ ನಿರ್ಣಯ ತೆಗೆದುಕೊಳ್ಳುವವರು ಯಾರೂ ಇಲ್ಲವೇನೋ. ಆದರೆ ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಅದೇ ಕೆಲಸ ಮಾಡಿದ್ದಾರೆ.

ಸಾಮಾನ್ಯವಾಗಿ ಧೋನಿ ಡಿಆರ್ ಎಸ್ ತೆಗೆದುಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ನಾಯಕ, ಬೌಲರ್, ಬ್ಯಾಟ್ಸ್ ಮನ್ ಗೆ ಸರಿಯಾದ ಸೂಚನೆ ಕೊಡುತ್ತಾರೆ. ಅದೇ ಕೆಲಸವನ್ನು ರಿಷಬ್ ಪಂತ್ ಕೂಡಾ ಮೊನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಮಾಡಿದ್ದಾರೆ.

ಆಸೀಸ್ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರೇ ಸ್ವೀಪ್ ಮಾಡಿದ ಬಾಲ್ ರಿಷಬ್ ಕೈ ಬಂದು ಸೇರಿತ್ತು. ಫೀಲ್ಡರ್ ಗಳು ಔಟ್ ಗಾಗಿ ಮನವಿ ಸಲ್ಲಿಸಿದರೆ ಅಂಪಾಯರ್ ಔಟ್ ನೀಡಲಿಲ್ಲ. ಆದರೆ ವಿಕೆಟ್ ಕೀಪರ್ ರಿಷಬ್ ಪಂತ್ ಡಿಆರ್ ಎಸ್ ತೆಗೆದುಕೊಳ್ಳಬೇಡಿ ಎಂದು ನಾಯಕ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಮತ್ತು ಬೌಲರ್ ಕುಲದೀಪ್ ಯಾದವ್ ಗೆ ಸಲಹೆ ನೀಡಿದರು. ರಿಷಬ್ ಸಲಹೆ ಸರಿಯಾಗಿಯೇ ಇತ್ತು. ರಿಪ್ಲೇನಲ್ಲಿ ನೋಡಿದಾಗ ಬಾಲ್ ಬ್ಯಾಟ್ ಗೆ ತಾಗದೇ ಮುಂಗೈಗೆ ತಾಕಿತ್ತಷ್ಟೇ. ಒಂದು ವೇಳೆ ರಿಷಬ್ ಮಾತು ಕೇಳದೇ ರಿವ್ಯೂ ಪಡೆದಿದ್ದರೆ ವೃಥಾ ಹಾಳಾಗುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏರ್ ಪೋರ್ಟ್ ನಲ್ಲೇ ಹಾರ್ದಿಕ್ ಪಾಂಡ್ಯ ಮೇಲೆ ಸಿಟ್ಟಾದ್ರಾ ರೋಹಿತ್ ಶರ್ಮಾ: ವೈರಲ್ Video

Video: ಶಿವಂ ದುಬೆಗೆ ಶುಭಮನ್ ಗಿಲ್ ಫ್ಲೈಯಿಂಗ್ ಶಾಕ್: ಸಿಎಸ್ಕೆ ಫ್ಯಾನ್ಸ್ ಸೈಲೆಂಟ್ ಮಾಡಿದ ಜಿಟಿ ಕ್ಯಾಪ್ಟನ್

IPL 2026: ಸಿಎಸ್ ಕೆ ಸೋಲಿಸಿದ ಬಳಿಕ ಆರ್ ಸಿಬಿ ಫ್ಯಾನ್ಸ್ ಬಗ್ಗೆ ಕಾಮೆಂಟ್ ಮಾಡಿದ್ದೇಕೆ ಶುಭಮನ್ ಗಿಲ್

ಅಫ್ಘಾನಿಸ್ತಾನ ಸರಣಿಗೆ ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ ನೀಡಲು ಹೊರಟಿದ್ದ ಆಯ್ಕೆ ಸಮಿತಿ ಯೂ ಟರ್ನ್ ಹೊಡೆದಿದ್ದೇಕೆ

IPL 2026: ಗುಜರಾತ್‌ ಟೈಟನ್ಸ್ ವಿರುದ್ಧ ಹೀನಾಯವಾಗಿ ಸೋತು ಪ್ಲೇ ಆಫ್‌ ರೇಸ್‌ನಿಂದ ಸಿಎಸ್‌ಕೆ ಔಟ್‌

ಮುಂದಿನ ಸುದ್ದಿ
Show comments