Daily Horoscope
✕

RCB vs PBKS: ಈ ಸಲ ಕಪ್ ಯಾರದ್ದೇ ಆಗಿರ್ಲಿ ದಾಖಲೆ ಫಿಕ್ಸ್

Krishnaveni K
ಸೋಮವಾರ, 2 ಜೂನ್ 2025 (09:40 IST)
ಅಹಮ್ಮದಾಬಾದ್: ಐಪಿಎಲ್ 2025 ರ ಫೈನಲ್ ನಲ್ಲಿ ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಆಡುವುದು ಕನ್ ಫರ್ಮ್ ಆಗಿದೆ. ಪಂಜಾಬ್ ಗೆ ಇದು ಮೊದಲ ಫೈನಲ್ ಆದರೆ ಆರ್ ಸಿಬಿಗೆ ನಾಲ್ಕನೆಯದ್ದು. ಈ ಬಾರಿ ಯಾರೇ ಕಪ್ ಗೆದ್ದರೂ ದಾಖಲೆಯಾಗುವುದು ಫಿಕ್ಸ್.

ಮುಂಬೈ ಇಂಡಿಯನ್ಸ್ ತಂಡವನ್ನು ಎಲಿಮಿನೇಟರ್ ಪಂದ್ಯದಲ್ಲಿ ಸೋಲಿಸಿದ ಪಂಜಾಬ್ ಕಿಂಗ್ಸ್ ಫೈನಲ್ ತಲುಪಿದೆ. ಇದೇ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ಐಪಿಎಲ್ ಫೈನಲ್ ತಲುಪಿದೆ. ಸಹಜವಾಗಿಯೇ ಪಂಜಾಬ್ ತಂಡದಲ್ಲಿ ಈಗ ಖುಷಿ ಮೇರೆ ಮೀರಿದೆ.

ಈ ಬಾರಿ ಐಪಿಎಲ್ ಫೈನಲ್ ವಿಶೇಷವಾಗಿದೆ. ಇದುವರೆಗೆ ಸಿಎಸ್ ಕೆ, ಮುಂಬೈ ಇಂಡಿಯನ್ಸ್ ಇಲ್ಲವೇ ಕೆಕೆಆರ್ ತಂಡವೇ ಐಪಿಎಲ್ ಫೈನಲ್ ನಲ್ಲಿರುತ್ತಿತ್ತು. ಈ ತಂಡಗಳೇ ಚಾಂಪಿಯನ್ ಆಗಿದ್ದು ಹೆಚ್ಚು. ಆದರೆ ಈ ಬಾರಿ ಹೊಸ ತಂಡಗಳೆರಡು ಫೈನಲ್ ನಲ್ಲಿವೆ.

ಆರ್ ಸಿಬಿಗೆ ಇದುವರೆಗೆ ಫೈನಲ್ ತಲುಪಿದರೂ ಕಪ್ ಗೆಲ್ಲಲಾಗಲಿಲ್ಲ ಎಂಬ ಬೇಸರವಿದೆ. ಈ ಕಾರಣಕ್ಕೆ ಈ ಬಾರಿ ಆರ್ ಸಿಬಿ ಕಪ್ ಗೆದ್ದರೆ ಅದು ದಾಖಲೆಯಾಗಲಿದೆ. ಇತ್ತ ಪಂಜಾಬ್ ಗೂ ಈ ಬಾರಿ ಕಪ್ ಗೆದ್ದರೆ ಅದು ಚೊಚ್ಚಲ ಕಪ್. ಹೀಗಾಗಿ ಪಂಜಾಬ್ ತಂಡ ಗೆದ್ದರೂ ದಾಖಲೆಯಾಗಲಿದೆ. ಇನ್ನು, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಳೆದ ಬಾರಿ ಕೆಕೆಆರ್ ತಂಡ ಕಪ್ ಗೆದ್ದಿತ್ತು. ಹೀಗಾಗಿ ಈ ವರ್ಷ ಪಂಜಾಬ್ ಕಪ್ ಗೆದ್ದರೆ ಶ್ರೇಯಸ್ ಅಯ್ಯರ್ ಸತತ ಎರಡು ಬಾರಿ ನಾಯಕರಾಗಿ ಕಪ್ ಗೆದ್ದ ದಾಖಲೆ ಮಾಡಲಿದ್ದಾರೆ. ಹೀಗಾಗಿ ಈ ಬಾರಿ ಯಾವುದೇತಂಡ ಕಪ್ ಗೆದ್ದರೂ ಅದು ದಾಖಲೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೋಲ್ಡ್ ವಾರ್ ಇನ್ನೂ ನಿಂತಿಲ್ವಾ: ಮೈದಾನದಲ್ಲಿ ಇಬ್ಬರ ವರ್ತನೆಗೆ ಫ್ಯಾನ್ಸ್ ಶಾಕ್ Video

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಕನ್ನಡಿಗ ಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಗೆ ಇದೆಂಥಾ ಅನ್ಯಾಯ.. 199 ರನ್ ಗಳಿಸಿದ್ದಾಗ ಹೀಗೆ ಮಾಡೋದಾ.. Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments