Webdunia - Bharat's app for daily news and videos

Install App

Shreyas Iyer: ಫೈನಲ್ ಗೇರಿದರೂ ನಗುವಿಲ್ಲ.. ಶ್ರೇಯಸ್ ಅಯ್ಯರ್ ಹೀಗ್ಯಾಕೆ ಮಾಡಿದ್ರು: ವಿಡಿಯೋ

Krishnaveni K
ಸೋಮವಾರ, 2 ಜೂನ್ 2025 (08:48 IST)
Photo Credit: X
ಅಹಮ್ಮದಾಬಾದ್: ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಗೇರಿಸಿದರೂ ನಾಯಕ ಶ್ರೇಯಸ್ ಅಯ್ಯರ್ ಮುಖದಲ್ಲಿ ನಗುವೇ ಇಲ್ಲ. ಶ್ರೇಯಸ್ ಹೀಗ್ಯಾಕೆ ಮಾಡಿದರು ಎಂದು ಅಭಿಮಾನಿಗಳಿಗೆ ಅನಿಸಿರಬಹುದು.

ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಕ್ವಾಲಿಫೈಯರ್ 1 ರಲ್ಲಿ ಆಡಿದ್ದ ಪಂಜಾಬ್ ತಂಡ ಆರ್ ಸಿಬಿ ಎದುರು ಸೋತಿತು. ಆಗ ಎಲ್ಲರೂ ಪಂಜಾಬ್ ನ್ನು ಅದೃಷ್ಟದಿಂದ ಕ್ವಾಲಿಫೈಯರ್ ಗೆ ಬಂದವರು ಎಂದು ಕುಹುಕವಾಡಿದ್ದರು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದ ಪಂಜಾಬ್ ಪಡೆ ಅಧಿಕಾರಯುತವಾಗಿ ಫೈನಲ್ ಗೇರಿತು. ಗೆಲುವಿನ ರನ್ ನ್ನು ಸ್ವತಃ ನಾಯಕ ಶ್ರೇಯಸ್ ಅಯ್ಯರ್ ಸಿಡಿಸಿದರು.

ಇದು ಅವರ ನಾಯಕತ್ವದಲ್ಲಿ ಸತತ ಎರಡನೇ ಫೈನಲ್. ಕಳೆದ ಬಾರಿ ಶ್ರೇಯಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಫೈನಲ್ ಗೇರಿದ್ದರಲ್ಲದೆ, ಚಾಂಪಿಯನ್ ಕೂಡಾ ಆಗಿದ್ದರು. ಇದೀಗ ಎರಡನೇ ಬಾರಿಗೆ ಪಂಜಾಬ್ ತಂಡದ ನಾಯಕರಾಗಿ ಫೈನಲ್ ಗೇರಿದ್ದಾರೆ. ಹೀಗಾಗಿಯೇ ಅವರ ನಾಯಕತ್ವದ ಬಗ್ಗೆ ಈಗ ಹೊಗಳಿಕೆಯ ಸುರಿಮಳೆಯಾಗುತ್ತಿದೆ.

ಹಾಗಿದ್ದರೂ ನಿನ್ನೆಯ ಪಂದ್ಯ ಸೋಲಿಸಿದ ಬಳಿಕ ಅವರು ಸೆಲೆಬ್ರೇಷನ್ ಬಿಡಿ ಒಂದು ನಗು ಕೂಡಾ ಆಡಿಲ್ಲ. ಹೀಗಾಗಿಯೇ ಅಭಿಮಾನಿಗಳು ಅವರನ್ನು ಪ್ರಬುದ್ಧ ನಡೆ ಎಂದು ಕೊಂಡಾಡಿದ್ದಾರೆ. ಈಗಿನ್ನೂ ಫೈನಲ್ ಗೇರಿದ್ದೇವೆ, ನಿಜವಾದ ಸಾಧನೆ ಫೈನಲ್ ನಲ್ಲಿ ಮಾಡಬೇಕು. ಆಗಲೇ ನಗು, ಸಂಭ್ರಮವೆಲ್ಲಾ ಎನ್ನುವಂತಿತ್ತು ಅವರ ಮುಖಭಾವ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

ತಂದೆ ಸಚಿನ್ ಹಾದಿಯಲ್ಲೇ ನಡೆದ ಮಗ ಅರ್ಜುನ್‌, ಕೈ ಹಿಡಿಯಲಿರುವ ಸಾನಿಯಾ ವಯಸ್ಸೆಷ್ಟು ಗೊತ್ತಾ

ಮತ್ತೆ ಬ್ಯಾಟ್‌ ಹಿಡಿಯಲು ಸಜ್ಜಾದ ಸೂರ್ಯಕುಮಾರ್‌ ಯಾದವ್: ಏಷ್ಯಾ ಕಪ್‌ ಟೂರ್ನಿಗೆ ಮುನ್ನ ಪರೀಕ್ಷೆಯಲ್ಲಿ ಪಾಸ್‌

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ನಿಶ್ಚಿತಾರ್ಥ: ಸಚಿನ್ ಸೊಸೆಯಾಗುತ್ತಿರುವ ಸಾನಿಯಾ ಯಾರು

Rishabh Pant: ಕ್ರಿಕೆಟ್ ಆಡಲಾಗುತ್ತಿಲ್ಲ, ಅಸಹಾಯಕನಾದ ರಿಷಭ್ ಪಂತ್: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments