Select Your Language

Notifications

webdunia
webdunia
webdunia
webdunia

ಯಾವಾಗ ವಿರಾಟ್ ಕೊಹ್ಲಿ ಆ ಮಾತು ಹೇಳಿದ್ರೋ ಆವತ್ತಿಂದ ಆರ್ ಸಿಬಿ ಲಕ್ ಬದಲಾಯ್ತು

Virat Kohli
ಬೆಂಗಳೂರು: ಯಾವಾಗ ಕಿಂಗ್ ವಿರಾಟ್ ಕೊಹ್ಲಿ ಆ ಒಂದು ಮಾತು ಹೇಳಿದ್ರೋ ಆವತ್ತಿಂದ ಆರ್ ಸಿಬಿ ಮಹಿಳೆ ಮತ್ತು ಪುರುಷರ ತಂಡದ ಅದೃಷ್ಟವೇ ಬದಲಾಗಿದೆ. ಅಷ್ಟಕ್ಕೂ ವಿರಾಟ್ ಆವತ್ತು ಹೇಳಿದ್ದೇನು ಗೊತ್ತಾ?

2024 ರ ಐಪಿಎಲ್ ಗೆ ಮೊದಲು ವಿರಾಟ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಕೊಹ್ಲಿ ಕನ್ನಡದಲ್ಲಿ ‘ಇದು ಆರ್ ಸಿಬಿಯ ಹೊಸ ಅಧ್ಯಾಯ’ ಎಂದಿದ್ದರು.

ಯಾವಾಗ ಕೊಹ್ಲಿ ಆ ಮಾತು ಹೇಳಿದ್ರೋ ಆವತ್ತಿಂದ ಆರ್ ಸಿಬಿಯ ಅದೃಷ್ಟವೇ ಬದಲಾಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಅದಾದ ಬಳಿಕ ಮಹಿಳೆಯರ ತಂಡ ಮೊದಲ ಬಾರಿಗೆ ಕಪ್ ಗೆದ್ದು ಬೀಗಿತ್ತು. ಇದರ ಬೆನ್ನಲ್ಲೇ ಪುರುಷರ ತಂಡವೂ ಕಳೆದ ಬಾರಿ ಮೊದಲ ಬಾರಿಗೆ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.

ಈ ಬಾರಿ ಮತ್ತೆ ಮಹಿಳಾ ತಂಡ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ಆರ್ ಸಿಬಿ ಫ್ರಾಂಚೈಸಿಗೆ ಹ್ಯಾಟ್ರಿಕ್ ಕಪ್ ಗೆದ್ದುಕೊಟ್ಟಿದೆ. ಇದೇ ಕಾರಣಕ್ಕೆ ಆರ್ ಸಿಬಿ ಫ್ರಾಂಚೈಸಿ ಕೂಡಾ ಕೊಹ್ಲಿಯ ಅಂದಿನ ಮಾತುಗಳ ವಿಡಿಯೋ ಹಂಚಿಕೊಂಡು ಅಲ್ಲಿಂದಲೇ ಎಲ್ಲಾ ಶುರುವಾಯ್ತು ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

T20 WC: ಟಿ20 ವಿಶ್ವಕಪ್ ಗೆ ಇಂದು ಚಾಲನೆ: ಟೀಂ ಇಂಡಿಯಾ, ಅಮೆರಿಕಾ ಪಂದ್ಯ ಎಲ್ಲಿ, ಎಷ್ಟೊತ್ತಿಗೆ ವೀಕ್ಷಿಸಬೇಕು