Daily Horoscope

Select Your Language

Notifications

webdunia
webdunia
webdunia
webdunia

WPL 2026 Final: ಆರ್ ಸಿಬಿಗೆ ಎರಡನೇ ಸಲ ಕಪ್ ಗೆದ್ದುಕೊಟ್ಟು ಫ್ಯಾನ್ಸ್ ಬಗ್ಗೆ ಚಿನ್ನದಂಥಾ ಮಾತನಾಡಿದ ಸ್ಮೃತಿ ಮಂಧಾನ

Smriti Mandhana
Photo Credit: X
ವಡೋದರ: ಡಬ್ಲ್ಯುಪಿಎಲ್ 2026 ರ ಫೈನಲ್ ಗೆದ್ದು ಆರ್ ಸಿಬಿ ಎರಡನೇ ಬಾರಿಗೆ ಚಾಂಪಿಯನ್ ಆದ ಬಳಿಕ ನಾಯಕಿ ಸ್ಮೃತಿ ಮಂಧಾನ ಅಭಿಮಾನಿಗಳ ಬಗ್ಗೆ ಚಿನ್ನದಂಥಾ ಮಾತನಾಡಿದ್ದಾರೆ.

ಆರ್ ಸಿಬಿಗೆ ಇರುವಷ್ಟು ಫ್ಯಾನ್ಸ್ ಬೇರೆ ಯಾವುದೇ ಫ್ರಾಂಚೈಸಿಗಿಲ್ಲ. ಸೋಲಲಿ, ಗೆಲ್ಲಲಿ ತಂಡದ ಜೊತೆಗೇ ಇರುವ ಅಪ್ಪಟ ಅಭಿಮಾನಿಗಳು. ಹೀಗಾಗಿ ಆರ್ ಸಿಬಿ ಕ್ರಿಕೆಟಿಗರೂ ಪ್ರತೀ ಬಾರಿಯೂ ಗೆಲುವು, ಸೋಲಿನ ಬಳಿಕ ಅಭಿಮಾನಿಗಳನ್ನು ನೆನೆಯಲು ಮರೆಯುವುದಿಲ್ಲ.

ನಿನ್ನೆ ಗೆಲುವಿನ ಬಳಿಕವೂ ಸ್ಮೃತಿ ಸೇರಿದಂತೆ ಎಲ್ಲಾ ಆಟಗಾರರೂ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪ್ರಶಸ್ತಿ ನೀಡುವಾಗ ಮಾತನಾಡಿದ ಸ್ಮೃತಿ ಮಂಧಾನ ‘ಈ ಗೆಲುವು ತುಂಬಾ ಸಂತೋಷ ಕೊಟ್ಟಿದೆ. ಆರ್ ಸಿಬಿ ಅಭಿಮಾನಿಗಳು ಜಗತ್ತಿನ ಅತ್ಯುತ್ತಮ ಅಭಿಮಾನಿಗಳು. ನಾವು ಎಲ್ಲೇ ಆಡಿದರೂ ನಮಗೆ ಅವರ ಬೆಂಬಲ ಇದ್ದೇ ಇರುತ್ತಾರೆ. ಈವತ್ತೂ ನೋಡಿ ಪಂದ್ಯ ಮುಗಿದ ಬಳಿಕವೂ ಇಷ್ಟು ಜನ ನಮ್ಮನ್ನು ಬೆಂಬಲಿಸಲು, ಚಿಯರ್ ಮಾಡಲು ನಮ್ಮ ಜೊತೆ ಇಲ್ಲೇ ನಿಂತಿದ್ದಾರೆ. ಹೀಗಾಗಿ ನಾವು ಏನೇ ಮಾಡುವುದಿದ್ದರೂ ಅವರಿಗಾಗಿ. ಈ ಗೆಲುವು ನಿಮಗಾಗಿ ಅಭಿಮಾನಿಗಳೇ. ಪ್ರತೀ ಬಾರಿ ಹೇಳುವ ಹಾಗೆ ಈವತ್ತೂ ಹೇಳ್ತಿದ್ದೇನೆ, ಈ ಸಲ ಕಪ್ ನಮ್ದು 2’ ಎಂದು ಸ್ಮೃತಿ ಮಂಧಾನ ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನ ಬಳಿಕ ಅಪ್ಪನ ಜೊತೆ ಸಂಭ್ರಮಿಸಿದ ಸ್ಮೃತಿ ಮಂಧಾನ: ಡೈಮಂಡ್ ಕಳ್ಕೊಂಡೆ ಎಂದ ಪಾಲಾಶ್ ಗೆ ಚುಚ್ಚಿದ ಫ್ಯಾನ್ಸ್