Publish Date: Thu, 05 Feb 2026 (23:08 IST)
Updated Date: Thu, 05 Feb 2026 (23:10 IST)
ವಡೋದರಾ: ಈ ಸಲ ಕಪ್ ನಮ್ದು ಎನ್ನುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ಮಹಿಳೆಯರು ಎರಡನೇ ಸಲ ಕಪ್ ನಮ್ದು ಎಂದಿದ್ದಾರೆ. ಡಬ್ಲ್ಯುಪಿಎಲ್ 2026 ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದ ಆರ್ ಸಿಬಿ ಎರಡನೇ ಬಾರಿಗೆ ಚಾಂಪಿಯನ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ 204 ರನ್ ಗಳ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಆರ್ ಸಿಬಿ ಆರಂಭದಲ್ಲೇ ಗ್ರೇಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ನಾಯಕಿಯಾಗಿ ಖುದ್ದು ಜವಾಬ್ಧಾರಿ ಹೊತ್ತು ಆಡಿದ ಸ್ಮೃತಿ ಮಂಧಾನ, ಜಾರ್ಜಿಯಾ ವಾಲ್ ಜೊತೆಗೆ ಶತಕದ ಜೊತೆಯಾಟವಾಡಿ 200 ರನ್ ಗುರಿ ಏನೂ ಅಲ್ಲ ಎಂಬಂತೆ ಆಡಿದರು.
ಜಾರ್ಜಿಯಾ ವಾಲ್ 54 ಎಸೆತಗಳಲ್ಲಿ 79 ರನ್ ಗಳಿಸಿ ಔಟಾದರು. ಆದರೆ ಗೆಲುವಿಗೆ ಇನ್ನೇನು 13 ರನ್ ಬಾಕಿಯಿದ್ದಾಗ ಸ್ಮೃತಿ 87 ರನ್ ಗಳಿಸಿ ಔಟಾದರು. ಈ ವೇಳೆ ಪಂದ್ಯದ ರೋಚಕತೆ ಹೆಚ್ಚಾಗಿತ್ತು. ಕೊನೆಯ ಓವರ್ ನಲ್ಲಿ 10 ಓವರ್ ಗಳು ಬೇಕಾಗಿತ್ತು. ಮೊದಲ ಎಸೆತದಲ್ಲಿ ರಾಧಾ ಸಿಂಗಲ್ಸ್ ಕಬಳಿಸಿದರು. ಮುಂದಿನ ಎಸೆತದಲ್ಲೂ ನಡಿನ್ ಸಿಂಗಲ್ಸ್ ಪಡೆದರು. ಈಗ 4 ಎಸೆತದಲ್ಲಿ 8 ರನ್ ಬೇಕಾಗಿತ್ತು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ ರಾಧಾ ಬೌಂಡರಿ ಗಳಿಸಿ ಗೆಲುವು ಗಳಿಸಿಯೇ ಬಿಟ್ಟರು. ಅಂತಿಮವಾಗಿ ಆರ್ ಸಿಬಿ 19.4 ಓವರ್ ಗಳಲ್ಲಿ 204 ರನ್ ಗಳಿಸಿತು.