ವಾರಿಯರ್ಸ್‌ ವಿರುದ್ಧ ಹೋರಾಡಿ ಸೋತ ಆರ್‌ಸಿಬಿ: ನಾಕೌಟ್‌ ರೇಸ್‌ನಿಂದ ಹೊರಬಿದ್ದ ಮಂದಾನ ಪಡೆ

Sampriya
ಶನಿವಾರ, 8 ಮಾರ್ಚ್ 2025 (23:15 IST)
Photo Courtesy X
ಲಖನೌ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಶನಿವಾರ ನಡೆದ ಗುಂಪು ಹಂತದಲ್ಲಿ ಯು.ಪಿ ವಾರಿಯರ್ಸ್‌ ವಿರುದ್ಧ 12 ರನ್‌ಗಳ ರೋಚಕ ಸೋಲು ಅನುಭವಿಸಿದೆ.

ಟಾಸ್ ಗೆದ್ದ ಸ್ಮೃತಿ ಮಂದಾನ ಪಡೆದ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿದ್ದರು. ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ತಂಡವು ಜಾರ್ಜಿಯಾ ವಾಲ್‌ (ಔಟಾಗದೇ 99) ಅವರ ಅಮೋಘ ಬ್ಯಾಟಿಂಗ್‌ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 225 ರನ್‌ ಗಳಿಸಿತು. ಇದು ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.

ಈ ಕಠಿಣ ಗುರಿಯನ್ನು ಬೆನ್ನತ್ತಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಉತ್ತಮ ಹೋರಾಟ ನಡೆಸಿ ಸೋಲು ಕಂಡಿತು. 19.3 ಓವರ್‌ಗಳಲ್ಲಿ 213 ರನ್‌ ಗಳಿಸಿ ಸೋಲು ಕಂಡಿತು. ಆರ್‌ಸಿಬಿ ಪರ 69 ರನ್‌ ಗಳಿಸಿ ಅಬ್ಬರಿಸಿದರು. ಕೊನೆಯಲ್ಲಿ ಆರು ಎಸೆತಗಳಲ್ಲಿ 26 ರನ್‌ ಗಳಿಸಿ ಸ್ನೇಹಾ ರಾಣಾ ಗೆಲುವಿನ ಆಸೆ ಹುಟ್ಟಿಸಿದರು. ಆದರೆ, ಅವರ ವಿಕೆಟ್‌ ಪತನದೊಂದಿಗೆ ತಂಡದ ಗೆಲುವಿನ ಕನಸು ಭಗ್ನಗೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯನ್ಸ್‌ ಮತ್ತು ಗುಜರಾತ್‌ ಜೈಂಟ್ಸ್ ತಂಡವು ಪ್ಲೇ ಆಫ್‌ಗೆ ಮುನ್ನಡೆದರೆ, ಆರ್‌ಸಿಬಿ ಮತ್ತು ವಾರಿಯರ್ಸ್‌ ತಂಡವು ನಾಕೌಟ್‌ ರೇಸ್‌ನಿಂದ ಹೊರಬಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು

ಏನೂ ಸಾಧಿಸದವರೆಲ್ಲಾ ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸುತ್ತಿದ್ದಾರೆ, ನನಗೂ ಹೀಗೇ ಆಗಿದೆ ಎಂದ ಹರ್ಭಜನ್

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್‌: ಬೌಲರ್‌ಗಳನ್ನು ಪ್ರಶಂಸಿಸಿದ ನಾಯಕ

ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ: ರೋಹಿತ್ ಶರ್ಮಾಗೆ ನಗುವೋ ನಗು video

ಮುಂದಿನ ಸುದ್ದಿ
Show comments