ಆರ್ ಸಿಬಿ ಕ್ವೀನ್ ಸ್ಮೃತಿ ಮಂದಾನಾಗೆ ಬೆಂಗಳೂರಿನ ದೋಸೆ ಬಲು ಪ್ರೀತಿ

Krishnaveni K
ಗುರುವಾರ, 22 ಫೆಬ್ರವರಿ 2024 (08:30 IST)
Photo Courtesy: Twitter
ಬೆಂಗಳೂರು: ಡಬ್ಲ್ಯುಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿರುವ ಕ್ರಿಕೆಟ್ ಕ್ವೀನ್ ಸ್ಮೃತಿ ಮಂದಾನಾಗೆ ಬೆಂಗಳೂರಿನಲ್ಲಿ ಏನು ಇಷ್ಟ ಎಂದು ಆರ್ ಸಿಬಿ ಸಂದರ್ಶನದಲ್ಲಿ ಅವರೇ ಬಹಿರಂಗಪಡಿಸಿದ್ದಾರೆ.

ಡಬ್ಲ್ಯುಪಿಎಲ್ ಟೂರ್ನಿ ನಾಳೆ ಆರಂಭವಾಗಲಿದೆ. ಇದಕ್ಕೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕಿ ಸ್ಮೃತಿ ಮಂದಾನ ಜೊತೆ ಚಿಟ್ ಚ್ಯಾಟ್ ನಡೆಸಿದೆ. ಸ್ಮೃತಿಗೆ ಒಟ್ಟು 12 ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ವೇಳೆ ಬೆಂಗಳೂರಿನಲ್ಲಿ ನೀವು ಸೇವಿಸಲು ಬಯಸುವ ಆಹಾರ ಯಾವುದು ಎಂದು ಕೇಳಲಾಯಿತು. ಇದಕ್ಕೆ ಸ್ಮೃತಿ ದೋಸೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸಿಗುವ ವಿವಿಧ ವೆರೈಟಿ ದೋಸೆ ಎಂದರೆ ನನಗೆ ತುಂಬಾ ಇಷ್ಟ. ಇಲ್ಲಿಗೆ ಬಂದಾಗ ಅದನ್ನು ತಿನ್ನಲು ಇಷ್ಟಪಡುತ್ತೇನೆ ಎಂದಿದ್ದಾರೆ. ವಿಶೇಷವೆಂದರೆ ಕ್ರಿಕೆಟ್ ಕಿಂಗ್ ಕೊಹ್ಲಿ ಕೂಡಾ ಬೆಂಗಳೂರಿನ ದೋಸೆ ಪ್ರಿಯರು. ಸ್ಮೃತಿಯನ್ನು ಮಹಿಳಾ ಕ್ರಿಕೆಟ್ ನ ಕೊಹ್ಲಿ ಎಂದೇ ಪರಿಗಣಿಸಲಾಗುತ್ತದೆ. ಅವರ ಜೆರ್ಸಿ ನಂಬರ್ ಕೂಡಾ ಕೊಹ್ಲಿಯಂತೇ 18 ಆಗಿದೆ. ಇದರ ಹಿಂದಿನ ಕಾರಣವನ್ನೂ ಅವರು ಆರ್ ಸಿಬಿ ಚಿಟ್ ಚ್ಯಾಟ್ ನಲ್ಲಿ ಬಹಿರಂಗಪಡಿಸಿದ್ದಾರೆ.

ನಾನು ಭಾರತ ತಂಡಕ್ಕೆ ಬಂದಾಗ 7 ನಂಬರ್ ಚ್ಯೂಸ್ ಮಾಡಲು ಬಯಸಿದ್ದೆ. ಆದರೆ ಅದು ನನಗೆ ಸಿಗಲಿಲ್ಲ. ಆಗ ನನ್ನ ಬರ್ತ್ ಡೇ 18 ಅಲ್ವಾ. ಹಾಗಾಗಿ 18 ನಂಬರ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಅಂದಿನಿಂದ 18 ನಂಬರ್ ಜೆರ್ಸಿ ತೊಡುತ್ತಿದ್ದೇನೆ ಎಂದರು.

ಇನ್ನು, ಆರ್ ಸಿಬಿ ಫ್ಯಾನ್ಸ್ ಬಗ್ಗೆ ವಿಶೇಷವಾಗಿ ಪ್ರಶ್ನೆ ಕೇಳಲಾಯಿತು. ಆಗ ಆರ್ ಸಿಬಿ ಫ್ಯಾನ್ಸ್ ಎಂದರೆ ನೆನಪಾಗುವುದೇ ವಿಧೇಯತೆ. ಬಹುಶಃ ಇಷ್ಟು ದೊಡ್ಡ ಫ್ಯಾನ್ ಬೇಸ್ ಯಾವ ತಂಡಕ್ಕೂ ಇಲ್ಲ. ನಾವು ಅದೃಷ್ಟಶಾಲಿಗಳು ಎಂದಿದ್ದಾರೆ. ಈ ಹಿಂದೊಮ್ಮೆ ಸಂದರ್ಶನದಲ್ಲಿ ಸ್ಮೃತಿ ಆರ್ ಸಿಬಿ ಅಭಿಮಾನಿಗಳು ಎಲ್ಲೇ ಹೋದರೂ ಈ ಸಲ ಕಪ್ ನಮ್ದೇ ಎನ್ನುತ್ತಾರೆ ಎಂದಿದ್ದರು. ಇದೀಗ ಮತ್ತೆ ತಮ್ಮ ಅಭಿಮಾನಿಗಳನ್ನು ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs AUS T20: ಮಳೆಗೆ ಕೊಚ್ಚಿ ಹೋದ ಮೊದಲ ಟಿ20

IND vs AUS T20: ಟಾಸ್ ಗೆದ್ದ ಆಸ್ಟ್ರೇಲಿಯಾ, ಮತ್ತೆ ಹರ್ಷಿತ್ ರಾಣಾಗೆ ಜೈ ಎಂದ ಗಂಭೀರ್

ರೋಹಿತ್ ಶರ್ಮಾ ಈಗ ವಿಶ್ವ ನಂ 1: ವಯಸ್ಸಾಯ್ತು ಎಂದವರಿಗೆ ತಕ್ಕ ತಿರುಗೇಟು ಕೊಟ್ಟ ಹಿಟ್ ಮ್ಯಾನ್

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

IND vs AUS T20: ಟೀಂ ಇಂಡಿಯಾಕ್ಕೆ ಇಂದಿನಿಂದ ಆಸ್ಟ್ರೇಲಿಯಾ ಟಿ20 ಪರೀಕ್ಷೆ

ಮುಂದಿನ ಸುದ್ದಿ
Show comments