ವಿರಾಟ್ ಕೊಹ್ಲಿಗೆ ಗಂಡು ಮಗುವಾಗಿದ್ದಕ್ಕೆ ಪಾಕಿಸ್ತಾನಿಯರ ಸಂಭ್ರಮ

Krishnaveni K
ಬುಧವಾರ, 21 ಫೆಬ್ರವರಿ 2024 (17:12 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ  ಮತ್ತು ಅನುಷ್ಕಾ ದಂಪತಿಗೆ ಗಂಡು ಮಗುವಾಗಿದ್ದಕ್ಕೆ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರ ಪಾಕಿಸ್ತಾನದಲ್ಲೂ ಸಂಭ್ರಮಿಸಿದ್ದಾರೆ.

ನಿನ್ನೆಯಷ್ಟೇ ವಿರುಷ್ಕಾ ದಂಪತಿಗೆ ತಮಗೆ ಗಂಡು ಮಗುವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೇ ಕೊಹ್ಲಿ ಅಭಿಮಾನಿಗಳು ಭಾರೀ ಸಂಭ್ರಮಪಟ್ಟಿದ್ದಾರೆ. ಫೆಬ್ರವರಿ 15 ಕ್ಕೆ ಅನುಷ್ಕಾ ಗಂಡು ಮಗುವಿಗೆ ಜನ್ಮವಿತ್ತಿದ್ದು, ಲಂಡನ್ ನಲ್ಲಿ ಹೆರಿಗೆಯಾಗಿದೆ.

ಇದೀಗ ಸಂಭ್ರಮಿಸಿದವರ ಪೈಕಿ ಪಾಕಿಸ್ತಾನಿ ಅಭಿಮಾನಿಗಳೂ ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ, ನೆರೆಯ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ. ಅಲ್ಲಿನ ಅಭಿಮಾನಿಗಳೂ ಕೊಹ್ಲಿಗೆ ಗಂಡು ಮಗುವಾಗಿರುವ ವಿಚಾರ ತಿಳಿದು ಸಂಭ್ರಮಿಸಿದ್ದಾರೆ.

ತಂದೆಯ ಕ್ರಿಕೆಟ್ ದಾಖಲೆಗಳನ್ನು ಮುರಿಯುವಂತೆ ಪುಟಾಣಿ ಅಕಾಯ್ ಗೆ ಹಾರೈಸಿದ್ದಾರೆ. ಸಚಿನ್ ತೆಂಡುಲ್ಕರ್ ಪುತ್ರನಂತೆ ವಿರಾಟ್ ಕೊಹ್ಲಿ ಪುತ್ರ ಕೂಡಾ ತಂದೆಯಂತೇ ದಿಗ್ಗಜ ಕ್ರಿಕೆಟಿಗನಾಗಲಿ ಎಂದಿದ್ದಾರೆ. ಕೊಹ್ಲಿ ದಂಪತಿಗೆ ಈಗಾಗಲೇ ಮೂರು ವರ್ಷದ ಹೆಣ್ಣು ಮಗುವಿದೆ. ಇದೀಗ ಗಂಡು ಮಗನ ಜನನವಾಗಿದೆ. ಪುತ್ರನಿಗೆ ಕೊಹ್ಲಿ ದಂಪತಿ ಅಕಾಯ್ ಎಂದು ನಾಮಕರಣ ಮಾಡಿದ್ದಾರೆ. ಕೊಹ್ಲಿಗೆ ಪುತ್ರನ ಜನನವಾದ ಬೆನ್ನಲ್ಲೇ ಆತನ ಹೆಸರಿನಲ್ಲಿ ಇನ್ ಸ್ಟಾಗ್ರಾಂನಲ್ಲಿ ಅನೇಕ ನಕಲಿ ಖಾತೆಗಳು ಹುಟ್ಟಿಕೊಂಡಿದ್ದವು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Womens World cup:ತವರಿನಲ್ಲಿ ಇತಿಹಾಸ ನಿರ್ಮಿಸುವ ತವಕದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ

ಟಿಕೆಟ್ ಎಲ್ಲಿ ಹೋಯ್ತು.. ಮಹಿಳಾ ವಿಶ್ವಕಪ್ ಫೈನಲ್ ಗೆ ಮುನ್ನ ಅಭಿಮಾನಿಗಳಿಂದ ಭಾರೀ ಆಕ್ರೋಶ

ದಬಂಗ್‌ ಡೆಲ್ಲಿ ತಂಡಕ್ಕೆ ಪ್ರೊ ಕಬಡ್ಡಿ ಲೀಗ್‌ ಕಿರೀಟ: ಫೈನಲ್‌ನಲ್ಲಿ ಮುಗ್ಗರಿಸಿದ ಪಟ್ನಾ ಪೈರೇಟ್ಸ್‌

ಕರ್ನಾಟಕ ದತ್ತುಪುತ್ರ ನಾನು.. ಕನ್ನಡ ರಾಜ್ಯೋತ್ಸವಕ್ಕೆ ದಿನೇಶ್ ಕಾರ್ತಿಕ್ ಹೇಳಿದ್ದೇನು Video

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೇಯಸ್ ಅಯ್ಯರ್: ಲೇಟೆಸ್ಟ್ ಹೆಲ್ತ್ ಅಪ್ ಡೇಟ್ ಇಲ್ಲಿದೆ

ಮುಂದಿನ ಸುದ್ದಿ
Show comments