Select Your Language

Notifications

webdunia
webdunia
webdunia
webdunia

ಫೆಬ್ರವರಿ 13 ಕ್ಕೂ ಆರ್ ಸಿಬಿಗೂ ಇದೆ ವಿಶೇಷ ಕನೆಕ್ಷನ್: ಇಲ್ಲಿದೆ ನೋಡಿ ಡೀಟೈಲ್ಸ್

RCB captain

Krishnaveni K

ಬೆಂಗಳೂರು , ಶುಕ್ರವಾರ, 14 ಫೆಬ್ರವರಿ 2025 (14:56 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅದರ ಬೆನ್ನಲ್ಲೇ ಫೆಬ್ರವರಿ 13 ಕ್ಕೂ ಆರ್ ಸಿಬಿಗೂ ಇರುವ ವಿಶೇಷ ಕನೆಕ್ಷನ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.

ಕಳೆದ ಆವೃತ್ತಿಯವರೆಗೆ ಫಾ ಡು ಪ್ಲೆಸಿಸ್ ತಂಡದ ನಾಯಕರಾಗಿದ್ದರು. ಈ ಆವೃತ್ತಿಗೆ ಆರ್ ಸಿಬಿ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಹೀಗಾಗಿ ಯಾರು ಹೊಸ ನಾಯಕ ಎಂಬ ಕುತೂಹಲ ಅಭಿಮಾನಿಗಳಿಗಿತ್ತು. ಅದಕ್ಕೆ ನಿನ್ನೆ ಉತ್ತರ ಸಿಕ್ಕಿದೆ.

ತಂಡದ ನೂತನ ನಾಯಕನಾಗಿ ರಜತ್ ಪಾಟಿದಾರ್ ರನ್ನು ಆಯ್ಕೆ ಮಾಡುತ್ತಿದ್ದಂತೇ ಆರ್ ಸಿಬಿಯ ಫೆಬ್ರವರಿ 13 ರ ಕನೆಕ್ಷನ್ ಬಯಲಾಗಿದೆ. ಫೆಬ್ರವರಿ 13 ಅಂದರೆ ನಿನ್ನೆ ರಜತ್ ಹೊಸ ನಾಯಕನಾಗಿ ನೇಮಕವಾಗಿದ್ದಾರೆ.

ವಿಶೇಷವೆಂದರೆ ಮಹಿಳೆಯರ ತಂಡದ ನಾಯಕಿ ಸ್ಮೃತಿ ಮಂಧನರನ್ನೂ ಇದೇ ದಿನ ತಂಡಕ್ಕೆ ಸೇರಿಸಲಾಗಿತ್ತು. ಹೀಗಾಗಿ ಆರ್ ಸಿಬಿ ಮತ್ತು ಫೆಬ್ರವರಿ 13 ಅಂದರೆ ಏನೋ ವಿಶೇಷ ಸಂಬಂಧವಿದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುವಂತಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್‌ ಟ್ರೋಫಿ ಮುಡಿಗೇರಿಸಿಕೊಳ್ಳುವ ತಂಡ ಎಷ್ಟು ಕೋಟಿ ಜೇಬಿಗಿಳಿಸಲಿದೆ ಗೊತ್ತಾ