Select Your Language

Notifications

webdunia
webdunia
webdunia
webdunia

ಕೋಚ್, ಆಟಗಾರರು ಹೇಳಿದ್ದು ಕೇಳದೇ ನೆಟ್ಸ್ ಆಕ್ರಮಿಸಿಕೊಂಡ ರವೀಂದ್ರ ಜಡೇಜಾ

Ravindra Jadeja

Krishnaveni K

ಧರ್ಮಶಾಲಾ , ಬುಧವಾರ, 6 ಮಾರ್ಚ್ 2024 (12:26 IST)
ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ. ಧರ್ಮಶಾಲಾದಲ್ಲಿ ನೆಟ್ ಪ್ರಾಕ್ಟೀಸ್ ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಬಿಟ್ಟು ಕೋಚ್ ಮಾತನ್ನೂ ಕೇಳದೇ ಸತತವಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಡೇಜಾ ಈಗಾಗಲೇ ಶತಕವನ್ನೂ ಸಿಡಿಸುವ ಮೂಲಕ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಕೆಎಲ್ ರಾಹುಲ್, ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟರ್ ಗಳ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಹೀಗಾಗಿ ಅವರೀಗ ಬೌಲಿಂಗ್ ಜೊತೆ ಬ್ಯಾಟಿಂಗ್ ನಲ್ಲೂ ಪ್ರಮುಖ ಆಟಗಾರರಾಗಿದ್ದಾರೆ.

ಇದೀಗ ಐದನೇ ಟೆಸ್ಟ್ ಪಂದ್ಯಕ್ಕಾಗಿ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಎಷ್ಟು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ ಎಂದರೆ ಸುದೀರ್ಘ ಅವಧಿಯವರೆಗೆ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಕೋಚಿಂಗ್ ಸ್ಟಾಫ್,  ಸಹ ಕ್ರಿಕೆಟಿಗರು ನೆಟ್ಸ್ ಬಿಟ್ಟುಕೊಡುವಂತೆ ಕೇಳಿಕೊಂಡರೂ ಬಿಡದೇ ಇನ್ನೂ ಬೌಲಿಂಗ್ ಮಾಡಿ ಎಂದು ಬ್ಯಾಟಿಂಗ್ ಮಾಡಿದ್ದಾರೆ.

ಸಾಮಾನ್ಯವಾಗಿ ಜಡೇಜಾ ಸುದೀರ್ಘ ಅವಧಿಯವರೆಗೆ ಬ್ಯಾಟಿಂಗ್ ಅಭ್ಯಾಸ ನಡೆಸುವುದು ಅಪರೂಪ. ಆದರೆ ಆ ರೀತಿ ಅಭ್ಯಾಸ ಆರಂಭಿಸಿದರೆ ಅವರನ್ನು ಹೊರಗೆ ಕರೆಯುವುದೇ ಕಷ್ಟವಂತೆ. ಈಗ ಅವರು ಆಭ್ಯಾಸ ನಡೆಸುತ್ತಿರುವ ಪರಿ ನೋಡಿದರೆ ಧರ್ಮಶಾಲಾ ಟೆಸ್ಟ್ ನಲ್ಲಿ ಮತ್ತೆ ಬ್ಯಾಟ್ ಝಳಪಿಸುವ ಲಕ್ಷಣ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2024: ಲಿಯೋ ಸ್ಟೈಲಲ್ಲಿ ಚೆನ್ನೈ ಕ್ಯಾಂಪ್ ಗೆ ಎಂಟ್ರಿ ಕೊಟ್ಟ ಧೋನಿ