Select Your Language

Notifications

webdunia
webdunia
webdunia
webdunia

ಬೆಳ್ಳಂ ಬೆಳಿಗ್ಗೆ ಧರ್ಮಶಾಲಾಗೆ ಬಂದು ಕ್ಯುರೇಟರ್ ಭೇಟಿಯಾದ ದ್ರಾವಿಡ್-ರೋಹಿತ್ ಶರ್ಮಾ

Rahul Dravid

Krishnaveni K

ಧರ್ಮಶಾಲಾ , ಮಂಗಳವಾರ, 5 ಮಾರ್ಚ್ 2024 (13:44 IST)
Photo Courtesy: Twitter
ಧರ್ಮಶಾಲಾ:ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಅಂತಿಮ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ಮಾರ್ಚ್ 7 ರಿಂದ ಆರಂಭವಾಗಲಿದೆ. ಈ ಪಂದ್ಯದ ಪಿಚ್ ಬಗ್ಗೆ ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಕ್ಯುರೇಟರ್ ಜೊತೆ ಮಾತುಕತೆ ನಡೆಸಿದ್ದಾರೆ.

ಧರ್ಮಶಾಲಾದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಹವಾಮಾನ ವರದಿ ಪ್ರಕಾರ ಮಳೆ ಭೀತಿಯಿದೆ. ಭಾರತ ತಂಡ ಇಲ್ಲಿಗೆ ಕಾಲಿಟ್ಟ ಗಳಿಗೆಯಲ್ಲೇ ಮಳೆಯಾಗುತ್ತಿದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ನಡೆಯುವುದು ಅನುಮಾನ ಎನ್ನುವ ವರಿದಗಳೂ ಇವೆ. ಈಗಾಗಲೇ ಭಾರತ ಸರಣಿ ಗೆದ್ದಿರುವುದರಿಂದ ಈ ಪಂದ್ಯದ ಫಲಿತಾಂಶ ಭಾರತದ ಮೇಲೆ ಏನೂ ಪರಿಣಾಮ ಬೀರದು.

ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ಸಾಕಷ್ಟು ಬಿಡುವು ಸಿಕ್ಕಿತ್ತು. ಈ ಬಿಡುವಿನಲ್ಲಿ ಭಾರತೀಯ ಕ್ರಿಕೆಟಿಗರು ಕುಟುಂಬದ ಜೊತೆ ಕಾಲ ಕಳೆದುಬಂದಿದ್ದಾರೆ. ಅತ್ತ ಇಂಗ್ಲೆಂಡ್ ಆಟಗಾರರು ಬೆಂಗಳೂರಿಗೆ ಬಂದು ರಿಲ್ಯಾಕ್ಸ್ ಆಗಿದ್ದಾರೆ.

ಇದೀಗ ಫ್ರೆಶ್ ಆಗಿ ಐದನೇ ಪಂದ್ಯಕ್ಕೆ ಕಣಕ್ಕಿಳಿಯುತ್ತಿದ್ದಾರೆ. ಇದರ ನಡುವೆ ಧರ್ಮಶಾಲಾದ ಪಿಚ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇಂದು ಬೆಳಿಗ್ಗೆಯೇ ಇಲ್ಲಿಗೆ ಬಂದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಪಿಚ್ ಕ್ಯುರೇಟರ್ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದು, ಪಿಚ್ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೋಚ್ ಮತ್ತು ನಾಯಕ ಸಲಹೆಯನ್ನು ಪರಿಗಣಿಸಿ ಅಂತಿಮ ಪಂದ್ಯಕ್ಕೆ ಪಿಚ್ ಮಾಡಿಕೊಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಮೂರು ತಂಡಗಳ ಹೊಸ ನಾಯಕರ ಪೈಕಿ ಯಾರು ಸ್ಟ್ರಾಂಗ್