Select Your Language

Notifications

webdunia
webdunia
webdunia
webdunia

ಕ್ರಿಕೆಟಿಗರ 100 ಟೆಸ್ಟ್ ಎಂದರೆ ಅಂಪಾಯರ್ ಆಗಿ ನಿತಿನ್ ಮೆನನ್ ಇರಲೇಬೇಕು

Nitin Menon

Krishnaveni K

ಧರ್ಮಶಾಲಾ , ಬುಧವಾರ, 6 ಮಾರ್ಚ್ 2024 (11:15 IST)
Photo Courtesy: Twitter
ಧರ್ಮಶಾಲಾ: ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಇದುವರೆಗೆ ಭಾರತ 13 ತಾರೆಯರು 100 ಟೆಸ್ಟ್ ಪಂದ್ಯವಾಡಿದ ದಾಖಲೆ ಮಾಡಿದ್ದಾರೆ. ವಿಶೇಷವೆಂದರೆ ಯಾವದೇ ದೇಶದ ಆಟಗಾರರ 100 ನೇ ಟೆಸ್ಟ್ ಎಂದರೆ ಅಂಪಾಯರ್ ಆಗಿ ನಿತಿನ್ ಮೆನನ್ ಇದ್ದೇ ಇರುತ್ತಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯ ರವಿಚಂದ್ರನ್ ಅಶ್ವಿನ್ ಪಾಲಿಗೆ 100 ನೇ ಟೆಸ್ಟ್ ಪಂದ್ಯವಾಗಿರಲಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಆಡಲು ಅವರು ಎದಿರು ನೋಡುತ್ತಿದ್ದಾರೆ. ಈ ಮೂಲಕ 100 ಟೆಸ್ಟ್ ಪಂದ್ಯವಾಡಿದ 14 ನೇ ಆಟಗಾರ ಎಂಬ ದಾಖಲೆಯನ್ನು ಅಶ್ವಿನ್ ಮಾಡಲಿದ್ದಾರೆ. ಆದರೆ ಅಶ್ವಿನ್ ಜೊತೆಗೆ ಅಂಪಾಯರ್ ನಿತಿನ್ ಮೆನನ್ ಕೂಡಾ ವಿಶೇಷ ಸಾಧನೆ ಮಾಡಲಿದ್ದಾರೆ.

ಭಾರತೀಯ ಮೂಲದ ಅಂಪಾಯರ್ ನಿತಿನ್ ಮೆನನ್ ಇತ್ತೀಚೆಗೆ 100 ಟೆಸ್ಟ್ ಪಂದ್ಯವಾಡಿದ ಬಹುತೇಕ ಆಟಗಾರರ ಪಂದ್ಯಕ್ಕೆ ಅಂಪಾಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿರಾಟ್ ಕೊಹ್ಲಿ 100 ನೇ ಟೆಸ್ಟ್ ಪಂದ್ಯಕ್ಕೆ ನಿತಿನ್ ಮೆನನ್ ಅಂಪಾಯರ್ ಆಗಿದ್ದರು. ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ 100 ನೇ ಟೆಸ್ಟ್ ಪಂದ್ಯ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ 100 ನೇ ಪಂದ್ಯಕ್ಕೂ ನಿತಿನ್ ಮೆನನ್ ಅಂಪಾಯರ್ ಆಗಿದ್ದರು.

ಇದೀಗ ರವಿಚಂದ್ರನ್ ಅಶ್ವಿನ್ 100 ನೇ ಪಂದ್ಯವಾಗಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೂ ನಿತಿನ್ ಮೆನನ್ ಅಂಪಾಯರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.  ಆ ಮೂಲಕ ಆಟಗಾರರ ಜೊತೆಗೆ ನಿತಿನ್ ಮೆನನ್ ಕೂಡಾ 100 ನೇ ಟೆಸ್ಟ್ ನ ದಾಖಲೆಯ ಪಂದ್ಯಕ್ಕೆ ಅಂಪಾಯರ್ ಆಗಿ ನಿರ್ವಹಿಸುವ ಸಾಧಕನಾಗಿ ಹೊರಹೊಮ್ಮಲಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ 2024: ಆರ್ ಸಿಬಿ ಕ್ವೀನ್ ಸ್ಮೃತಿ ಮಂಧಾನ ಸೌಂದರ್ಯದ ಗುಟ್ಟು ರಟ್ಟು