Select Your Language

Notifications

webdunia
webdunia
webdunia
webdunia

ಹೊಸ ದಾಖಲೆ ಮಾಡಲು ಸಜ್ಜಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಜೋಡಿ

Ravindra Jadeja-Ravichandran Ashwin

Krishnaveni K

ಚೆನ್ನೈ , ಮಂಗಳವಾರ, 17 ಸೆಪ್ಟಂಬರ್ 2024 (10:52 IST)
ಚೆನ್ನೈ: ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸ್ಪಿನ್ ಧ್ವಯರಾದ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಗಳಾದ ಅಶ್ವಿನ್-ಜಡೇಜಾ ಟೆಸ್ಟ್ ಮಾದರಿಯಲ್ಲಿ ಎದುರಾಳಿಗಳನ್ನು ಮುಗಿಸಲು ಪೈಪೋಟಿಗೆ ಬಿದ್ದವರಂತೆ ಆಡುತ್ತಾರೆ. ಅದರಲ್ಲೂ ಭಾರತೀಯ ಪಿಚ್ ಗಳಲ್ಲಿ ಇವರನ್ನು ಎದುರಿಸುವುದೇ ಎದುರಾಳಿಗಳಿಗೆ ದೊಡ್ಡ ಸವಾಲು. ಇದೀಗ ಸೆಪ್ಟೆಂಬರ್ 19 ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಈ ಸರಣಿಯಲ್ಲಿ ಈ ಸ್ಪಿನ್ನರ್ ಗಳು ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಚೆನ್ನೈ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ತವರು ಕ್ರೀಡಾಂಗಣ. ಇದೇ ಕ್ರೀಡಾಂಗಣದಲ್ಲಿ ಅವರು ಆಡಲು ಶುರು ಮಾಡಿದ್ದು. ಇದೀಗ ಈ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಿದರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ. 43 ಟೆಸ್ಟ್ ಪಂದ್ಯಗಳಿಂದ ಆಸ್ಟ್ರೇಲಿಯಾದ ನಥನ್ ಲಿಯೋನ್ 187 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ಅಶ್ವಿನ್ ಅವರಿಂದ 14 ವಿಕೆಟ್ ಗಳ ಅಂತರದಲ್ಲಿದ್ದಾರೆ.

ಇನ್ನು, ರವೀಂದ್ರ ಜಡೇಜಾ ಕೂಡಾ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಜಡೇಜಾ ಇನ್ನು 6 ವಿಕೆಟ್ ಕಬಳಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಕಬಳಿಸಿದ ದಾಖಲೆ ಮಾಡಲಿದ್ದಾರೆ. ಈ ಇಬ್ಬರೂ ಈ ದಾಖಲೆಗಳನ್ನು ಇದೇ ಸರಣಿಯಲ್ಲಿ ಮಾಡುವ ವಿಶ್ವಾಸವಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಗ್ಲಾದೇಶ ಮಣಿಸಲು ಅಚ್ಚರಿಯ ಅಸ್ತ್ರ ರೆಡಿ ಮಾಡ್ತಿದ್ದಾರೆ ರೋಹಿತ್ ಶರ್ಮಾ, ಗೌತಮ್ ಗಂಭೀರ್