ನಿವೃತ್ತಿ ಬಳಿಕ ರವಿಚಂದ್ರನ್ ಮುಂದಿನ ಭವಿಷ್ಯವೇನು: ಸುಳಿವು ಕೊಟ್ಟ ಕ್ರಿಕೆಟಿಗ

Krishnaveni K
ಗುರುವಾರ, 19 ಡಿಸೆಂಬರ್ 2024 (09:21 IST)
Photo Credit: X
ಬ್ರಿಸ್ಬೇನ್: ಟೀಂ ಇಂಡಿಯಾ ಕಂಡ ಅದ್ಭುತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ  ಗುಡ್ ಬೈ ಹೇಳಿದ್ದಾರೆ. ಹಾಗಿದ್ದರೆ ಅವರ ಮುಂದಿನ ಹಾದಿ ಏನು ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ.

ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಣೆ ಬಳಿಕ ನಾನು ಇನ್ನು ಮುಂದೆ ಕ್ಲಬ್ ಲೆವೆಲ್ ಕ್ರಿಕೆಟ್ ಅಡಿಕೊಂಡಿರುತ್ತೇನೆ ಎಂದಿದ್ದಾರೆ. ಹೀಗಾಗಿ ಮುಂದೆ ಒಂದು ಅಥವಾ ಎರಡು ವರ್ಷ ಅಶ್ವಿನ್ ಐಪಿಎಲ್ ಆಡಬಹುದು. ಯಾಕೆಂದರೆ ಅವರಿಗೆ ಈಗಾಗಲೇ 38 ವರ್ಷವಾಗಿದೆ.

ಇದಾದ ಬಳಿಕ ವಿದೇಶೀ ಲೀಗ್ ನಲ್ಲಿ ಭಾಗಿಯಾಗಲೂ ಬಹುದು. ಸುರೇಶ್ ರೈನಾ, ಯುವರಾಜ್ ಸಿಂಗ್ ರಂತೆ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬಹುದು. ಯಾಕೆಂದರೆ ಅಶ್ವಿನ್ ಗೆ ಕ್ರಿಕೆಟ್ ಮೇಲೆ ಅತಿಯಾದ ಪ್ರೀತಿಯಿದೆ ಎನ್ನುವುದು ಅವರ ಮಾತಿನಿಂದಲೇ ಗೊತ್ತಾಗುತ್ತದೆ.

ನಿವೃತ್ತಿ ಘೋಷಣೆ ಸಂದರ್ಭದಲ್ಲಿ ನಾನು ಆಡುವುದರಿಂದ ನಿವೃತ್ತಿಯಾಗುತ್ತಿದ್ದೇನಷ್ಟೇ ಹೊರತು ಕ್ರಿಕೆಟ್ ಲೋಕದಲ್ಲೇ ನಿಮ್ಮ ಜೊತೆಗೆ ಇರುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಹೀಗಾಗಿ ಅಶ್ವಿನ್ ಖಂಡಿತವಾಗಿಯೂ ಮುಂದೆ ಒಬ್ಬ ಕ್ರಿಕೆಟ್ ವಿಶ್ಲೇಷಕ ಅಥವಾ ಕಾಮೆಂಟೇಟರ್ ಆಗಿ ಮುಂದುವರಿಯಬಹುದು ಎಂಬ ಸುಳಿವ ನೀಡಿದ್ದಾರೆ. ಈಗಾಗಲೇ ಅವರು ತಮ್ಮದೇ ಯೂ ಟ್ಯೂಬ್ ಚಾನೆಲ್ ಹೊಂದಿದ್ದು ಕ್ರಿಕೆಟ್ ಕುರಿತಾದ ವಿಶ್ಲೇಷಣೆ ಮಾಡುತ್ತಿರುತ್ತಾರೆ. ಹೀಗಾಗಿ ಮುಂದೆಯೂ ಅಶ್ವಿನ್ ರನ್ನು ಈ ಫೀಲ್ಡ್ ನಲ್ಲಿ ನೋಡಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ: ಏಕದಿನ ಸರಣಿ ಕತೆ ಹಾಗಾಯ್ತು, ಇಂದಿನಿಂದ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ

DC vs MI, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಬೌಲಿಂಗ್ ಆಯ್ಕೆ

ಆರ್ ಸಿಬಿ ಆಟಗಾರ್ತಿ ಗೌತಮಿ ನಾಯ್ಕ್ ಗೆ ಸರ್ಪೈಸ್ ಕೊಟ್ಟ ಹಾರ್ದಿಕ್ ಪಾಂಡ್ಯ Video

IND vs NZ: ನ್ಯೂಜಿಲೆಂಡ್, ಟೀಂ ಇಂಡಿಯಾ ಟಿ20 ಸರಣಿಯ ವೇಳಾಪಟ್ಟಿ ಸಂಪೂರ್ಣ ವಿವರ ಇಲ್ಲಿದೆ

WPL 2026: ಗುಜರಾತ್ ವಿರುದ್ಧ ಗೆಲುವಿನ ಬಳಿಕ ಸ್ಮೃತಿ ಮಂಧಾನ ಮಾಡಿದ ಕೆಲಸಕ್ಕೆ ಎಲ್ಲರೂ ಫಿದಾ video

ಮುಂದಿನ ಸುದ್ದಿ
Show comments