ಮುಂಬೈ: ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಹೊರಬಿದ್ದ ಮೇಲೆ ರವಿಶಾಸ್ತ್ರಿ ಕಾಮೆಂಟೇಟರ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಬಹಳ ವರ್ಷಗಳ ನಂತರ ಅವರು ಐಪಿಎಲ್ ನಲ್ಲಿ ಕಾಮೆಂಟರಿ ಮಾಡಲಿದ್ದಾರೆ.
ಆದರೆ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅವರಿಗೆ ಐಪಿಎಲ್ ನಲ್ಲಿ ಕಾಮೆಂಟರಿ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದರ ಬಗ್ಗೆ ಅವರು ಆಕ್ರೋಶ ಹೊರಹಾಕಿದ್ದಾರೆ.
ಮೊದಲ 11 ವರ್ಷ ಐಪಿಎಲ್ ನಲ್ಲಿ ಕಾಮೆಂಟೇಟರ್ ಆಗಿದ್ದೆ. ಆದರೆ ಬಳಿಕ ಬಿಸಿಸಿಐನ ಸ್ವಯಂ ಹಿತಾಸಕ್ತಿ ನಿಯಮಾವಳಿ ಎಂಬ ಸ್ಟುಪಿಡ್ ನಿಯಮದಿಂದಾಗಿ ಕಾಮೆಂಟರಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಸ್ವಯಂ ಹಿತಾಸಕ್ತಿ ನಿಯಮಾವಳಿ ಪ್ರಕಾರ ಬಿಸಿಸಿಐಯ ಯಾವುದೇ ಹುದ್ದೆಯಲ್ಲಿರುವವರು ಐಪಿಎಲ್ ನಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗುವಂತಿಲ್ಲ. ರಾಷ್ಟ್ರೀಯ ತಂಡದ ಕೋಚ್ ಆಗಿದ್ದ ಕಾರಣಕ್ಕೆ ರವಿಶಾಸ್ತ್ರಿಗೆ ಇದೇ ನಿಯಮ ಅನ್ವಯವಾಗಿತ್ತು.