Select Your Language

Notifications

webdunia
webdunia
webdunia
webdunia

ಐಪಿಎಲ್ ನ ಈ ತಂಡ ಸೇರಿಕೊಳ್ಳಲಿದ್ದಾರೆ ರವಿಶಾಸ್ತ್ರಿ

ರವಿಶಾಸ್ತ್ರಿ
ನವದೆಹಲಿ: ಐಪಿಎಲ್ ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಅಹಮ್ಮದಾಬಾದ್ ತಂಡದ ಕೋಚ್ ಆಗಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇದಾದ ಬಳಿಕ ರವಿ ಶಾಸ್ತ್ರಿ ಐಪಿಎಲ್ ತಂಡದ ಕೋಚ್ ಹುದ್ದೆಗೆ ಪ್ರಯತ್ನಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿತ್ತು.

ಇದೀಗ ಲೇಟೆಸ್ಟ್ ಮಾಹಿತಿ ಪ್ರಕಾರ, ರವಿಶಾಸ್ತ್ರಿ ಅಹಮ್ಮದಾಬಾದ್ ತಂಡಕ್ಕೆ ಸೇರ್ಪಡೆಯಾಗುವ ಬಗ್ಗೆ ಮಾತುಕತೆ ನಡೆದಿದೆ. ರವಿಶಾಸ್ತ್ರಿ ಜೊತೆ ಟೀಂ ಇಂಡಿಯಾ ಹಾಲಿ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಕೂಡಾ ಐಪಿಎಲ್ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್:ಟೀಂ ಇಂಡಿಯಾಕ್ಕೆ ಕೊನೇ ಪಂದ್ಯ ಇಂದು