Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಚಾಂಪಿಯನ್ ಗಳಿಗೇ ಚಳ್ಳೆ ಹಣ್ಣು ತಿನ್ನಿಸಿದ ಕರ್ನಾಟಕ

ರಣಜಿ ಟ್ರೋಫಿ ಕ್ರಿಕೆಟ್: ಚಾಂಪಿಯನ್ ಗಳಿಗೇ ಚಳ್ಳೆ ಹಣ್ಣು ತಿನ್ನಿಸಿದ ಕರ್ನಾಟಕ
ನಾಗ್ಪುರ , ಬುಧವಾರ, 14 ನವೆಂಬರ್ 2018 (17:05 IST)
ನಾಗ್ಪುರ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಲೀಗ್ ಪಂದ್ಯವಾಡುತ್ತಿರುವ ಕರ್ನಾಟಕ ಹಾಲಿ ಚಾಂಪಿಯನ್ ವಿದರ್ಭದ ಎದುರು ಮೂರನೇ ದಿನದಂತ್ಯಕ್ಕೆ ಆಲ್ ರೌಂಡರ್ ಪ್ರದರ್ಶನ ತೋರಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ವಿದರ್ಭದ ಮೊದಲ ಇನಿಂಗ್ಸ್ ಮೊತ್ತವಾದ 308 ರನ್ ಗಳಿಗೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 378 ರನ್ ಗಳಿಸಿತು. ಈ ಮೂಲಕ 70 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಬಳಿಕ ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ವಿದರ್ಭದ 2 ವಿಕೆಟ್ ಕಿತ್ತಿರುವ ಕರ್ನಾಟಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ದಿನದಂತ್ಯಕ್ಕೆ ವಿದರ್ಭದ 2 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತ್ತು. ಕರ್ನಾಟಕದ ಪರ ಮೊದಲ ಇನಿಂಗ್ಸ್ ನಲ್ಲಿ ನಿನ್ನೆ ಅಜೇಯರಾಗಿ ದಿನದಾಟ ಮುಗಿಸಿದ್ದ ದೇಗಾ ನಿಶ್ಚಲ್ ಮತ್ತು ಶರತ್ ಶತಕ ಸಿಡಿಸಿ ಮಿಂಚಿದರು. ನಿಶ್ಚಲ್ 113 ರನ್ ಗಳಿಸಿದರೆ ಶರತ್ 103 ರನ್ ಗಳಿಸಿದರು. ನಾಳೆ ಒಂದು ದಿನದ ಪಂದ್ಯ ಬಾಕಿಯಿದ್ದು, ಕರ್ನಾಟಕಕ್ಕೆ ಗೆಲುವಿನ ಆಸೆ ಚಿಗುರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಎ ತಂಡಕ್ಕೆ ಬರುತ್ತಿರುವ ಟೀಂ ಇಂಡಿಯಾ ಆಟಗಾರರ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು ಗೊತ್ತಾ?