Publish Date: Sun, 24 Sep 2023 (09:19 IST)
Updated Date: Sun, 24 Sep 2023 (09:22 IST)
ಇಂಧೋರ್: ಯಾಕೋ ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಮಳೆ ಭೀತಿಯಲ್ಲೇ ಆಡುವಂತಾಗಿದೆ. ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೂ ಮಳೆ ಭೀತಿಯಿದೆ.
ಇಂದು ಇಂಧೋರ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯವಾಡಲಿದೆ. ಹವಾಮಾನ ವರದಿ ಪ್ರಕಾರ ಇಂದು ಇಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ‍್ಯತೆಯಿದೆ.
ಮೊಹಾಲಿಯಲ್ಲಿ ನಡೆದಿದ್ದ ಮೊದಲ ಪಂದ್ಯಕ್ಕೂ ಮಳೆ ಕೊಂಚ ಅಡ್ಡಿ ಮಾಡಿತ್ತು. ಆದರೆ ಸಂಪೂರ್ಣ ಆಟ ನಡೆದಿತ್ತು. ಇಂದೂ ಹನಿ ಮಳೆಯಾಗುವ ಸಾಧ‍್ಯತೆಯಿದ್ದು, ಕೆಲವು ಕಾಲ ಪಂದ್ಯಕ್ಕೆ ಅಡಚಣೆಯಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ.