Publish Date: Sun, 26 Jun 2022 (20:28 IST)
Updated Date: Sun, 26 Jun 2022 (20:30 IST)
ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಪಂದ್ಯದಲ್ಲಿ ಟಾಸ್ ಗೂ ಮುನ್ನವೇ ಮಳೆರಾಯನ ಆಗಮನವಾಗಿದೆ.
ಇಂದು ಹವಾಮಾನ ವರದಿ ಪ್ರಕಾರ ಮಳೆ ಬರುವ ಸೂಚನೆಯಿತ್ತು. ಅದರಂತೆ ಈಗ ಡುಬ್ಲಿನ್ ಮೈದಾನದಲ್ಲಿ ಮಳೆಯಾಗುತ್ತಿದ್ದು, ಪಂದ್ಯ ತಡವಾಗಿ ಆರಂಭವಾಗುವ ನಿರೀಕ್ಷೆಯಿದೆ.
ಸದ್ಯಕ್ಕೆ ಮೈದಾನವನ್ನು ಕವರ್ ಮಾಡಲಾಗಿದ್ದು, ಪಂದ್ಯ ತಡವಾಗಿ ಆರಂಭವಾದರೆ ಓವರ್ ಕಡಿತವಾಗುವ ಸಾಧ್ಯತೆಯಿದೆ. ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ.