Publish Date: Sun, 26 Jun 2022 (16:42 IST)
Updated Date: Sun, 26 Jun 2022 (16:44 IST)
ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಧ‍್ಯಪ್ರದೇಶ, ಮುಂಬೈ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿ ಚೊಚ್ಚಲ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿದೆ.
23 ವರ್ಷಗಳ ಹಿಂದೆ ಮಧ‍್ಯಪ್ರದೇಶ ರಣಜಿ ಟ್ರೋಫಿ ಫೈನಲ್ ಗೇರಿತ್ತು. ಆದರೆ ಅಂದು ಮೊದಲ ಬಾರಿಗೆ ಚಾಂಪಿಯನ್ ಆಗುವ ಕನಸು ನನಸಾಗಲೇ ಇಲ್ಲ. ಇಂದು 23 ವರ್ಷಗಳ ನಂತರ ಫೈನಲ್ ಗೇರಿದ ಮಧ್ಯಪ್ರದೇಶ ಮೊದಲ ಬಾರಿಗೆ ಚಾಂಪಿಯನ್ ಆಗುವ ಮೂಲಕ ಕನಸು ನನಸು ಮಾಡಿಕೊಂಡಿತು.
108 ರನ್ ಗಳ ಗೆಲುವಿನ ಗುರಿಯನ್ನು ಪಡೆದಿದ್ದ ಮಧ‍್ಯಪ್ರದೇಶ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ಫೈನಲ್ ನಲ್ಲಿ ಮುಂಬೈ ಪರ ಸರ್ಫರಾಜ್ ಖಾನ್ ಶತಕ ಸಿಡಿಸಿದ್ದು ಬಿಟ್ಟರೆ ಉಳಿದೆಲ್ಲಾ ರೀತಿಯಲ್ಲಿ ಮಧ‍್ಯಪ್ರದೇಶ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಹೊಂದಿತ್ತು.