ಮುಂಬೈ: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಟಕ್ಕೆ, ಅವರ ಕೋಚಿಂಗ್ ಶೈಲಿಗೆ ಮನಸೋಲದವರು ಯಾರಿದ್ದಾರೆ ಹೇಳಿ? ಆದರೆ ಇಲ್ಲೊಬ್ಬ ನಟಿಗೆ ದ್ರಾವಿಡ್ ಫಸ್ಟ್ ಲವ್ ಆಗಿದ್ದರಂತೆ.
ನಟಿ ರಿಚಾ ಚಡ್ಡಾ ಹೀಗೊಂದು ಸೀಕ್ರೆಟ್ ಬಯಲು ಮಾಡಿದ್ದಾರೆ. ನಾನು ದ್ರಾವಿಡ್ ಆಟಕ್ಕೆ ಮನಸೋತಿದ್ದೆ. ನನ್ನ ಬಾಲ್ಯದ ದಿನಗಳಲ್ಲಿ ಅವರೇ ನನ್ನ ಫಸ್ಟ್ ಲವ್ ಆಗಿದ್ದರು ಎಂದಿದ್ದಾರೆ.
ನನ್ನ ಅಣ್ಣ ಕ್ರಿಕೆಟ್ ಆಡುತ್ತಿದ್ದರು. ನನ್ನ ಹದಿಹರೆಯದಲ್ಲಿ ನಾನೂ ಕ್ರಿಕೆಟ್ ಪ್ರೇಮಿಯಾಗಿದ್ದೆ. ಅದರಲ್ಲೂ ದ್ರಾವಿಡ್ ಆಟವನ್ನು ಮಿಸ್ ಮಾಡದೇ ನೋಡುತ್ತಿದ್ದೆ. ಅವರು ನನ್ನ ಫಸ್ಟ್ ಲವ್ ಆಗಿದ್ದರು ಎಂದು ರಿಚಾ ಹೇಳಿಕೊಂಡಿದ್ದಾರೆ.