Publish Date: Tue, 23 Nov 2021 (12:00 IST)
Updated Date: Tue, 23 Nov 2021 (12:09 IST)
ಸಿಡ್ನಿ: ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಸಂದೇಶ ರವಾನಿಸಿದ ವಿಚಾರದಿಂದಾಗಿ ಆಸೀಸ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಟಿಮ್ ಪೇಯ್ನ್ ಗೆ ತಂಡಕ್ಕೆ ಮರಳಲು ಒಂದು ಅವಕಾಶ ನೀಡಲಾಗಿದೆ.
ಒಂದು ವೇಳೆ ಎಲ್ಲರೂ ಟಿಮ್ ವಾಪಸಾತಿಗೆ ಒಪ್ಪಿಗೆ ನೀಡಿದರೆ ತಂಡಕ್ಕೆ ಅವರನ್ನು ಮರು ಸೇರ್ಪಡೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಆಸ್ಟ್ರೇಲಿಯಾ ತಂಡದ ಆಯ್ಕೆಗಾರರು ಹೇಳಿದ್ದಾರೆ.
ಮುಂಬರುವ ಆಶಸ್ ಟೆಸ್ಟ್ ಸರಣಿಯ ಹಿನ್ನಲೆಯಲ್ಲಿ ಆಸೀಸ್ ತಂಡಕ್ಕೆ ಅವರನ್ನು ವಾಪಸಾತಿ ಮಾಡಿದರೂ ಅಚ್ಚರಿಯಿಲ್ಲ. ಆದರೆ ಇದಕ್ಕೂ ಮೊದಲು ತಂಡದ ಇತರ ಆಟಗಾರರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು.