Publish Date: Tue, 23 Nov 2021 (07:38 IST)
Updated Date: Tue, 23 Nov 2021 (11:41 IST)
ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ನಲ್ಲಿ ಕರ್ನಾಟಕ ಫೈನಲ್ ನಲ್ಲಿ ತಮಿಳುನಾಡು ವಿರುದ್ಧ 4 ವಿಕೆಟ್ ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಕರ್ನಾಟಕ ಪರ ಅಭಿನವ್ ಮನೋಹರ್ 46, ಪ್ರವೀಣ್ ದುಬೆ 33 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ತಮಿಳುನಾಡು ಎನ್ ಜಗದೀಶನ್ (41), ಶಾರುಖ್ ಖಾನ್ (ಅಜೇಯ 33) ರನ್ ಗಳ ನೆರವಿನಿಂದ ಅಂತಿಮ ಎಸೆತದಲ್ಲಿ ಗೆಲುವು ಕಂಡಿತು. ಇದರೊಂದಿಗೆ ತಮಿಳುನಾಡು ಮೂರನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.