Webdunia - Bharat's app for daily news and videos

Install App

Rahul Dravid: ಸಂಜು ಸ್ಯಾಮ್ಸನ್ ಜೊತೆ ಕಿರಿಕ್ ಇದ್ಯಾ: ರಾಹುಲ್ ದ್ರಾವಿಡ್ ಹೇಳಿದ್ದು ಕೇಳಿದ್ರೆ ಶಾಕ್ ಆಗ್ತೀರಿ

Krishnaveni K
ಶನಿವಾರ, 19 ಏಪ್ರಿಲ್ 2025 (17:47 IST)
Photo Credit: X
ಜೈಪುರ: ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಜೊತೆ ನಿಮಗೆ ಕಿರಿಕ್ ಇದ್ಯಾ ಎಂದು ಕೇಳಿದ್ದಕ್ಕೆ ಕೋಚ್ ರಾಹುಲ್ ದ್ರಾವಿಡ್ ನೀಡಿದ ಉತ್ತರ ಶಾಕಿಂಗ್ ಆಗಿದೆ.

ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ ಪಂದ್ಯ ಸೋತ ಬಳಿಕ ರಾಹುಲ್ ದ್ರಾವಿಡ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸಂಬಂಧ ಹಳಸಿದೆ ಎಂಬ ಸುದ್ದಿ ಹಬ್ಬಿತ್ತು. ಆಟಗಾರರ ಜೊತೆ ದ್ರಾವಿಡ್ ಮಾತುಕತೆ ನಡೆಸುತ್ತಿದ್ದರೆ ಸಂಜು ಮಾತ್ರ ಮುಖ ಸಪ್ಪಗೆ ಮಾಡಿಕೊಂಡು ಪ್ರತ್ಯೇಕವಾಗಿದ್ದ ವಿಡಿಯೋ ನೋಡಿ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿ ದಟ್ಟವಾಗಿತ್ತು.

ಈ ಬಗ್ಗೆ ಈಗ ಸ್ವತಃ ದ್ರಾವಿಡ್ ಮಾತನಾಡಿದ್ದಾರೆ. ‘ಇಂತಹ ಸುದ್ದಿಗಳು ಎಲ್ಲಿಂದ ಬರುತ್ತದೋ ನನಗೆ ಗೊತ್ತಿಲ್ಲ. ಸಂಜು ಮತ್ತು ನಾನು ಒಂದೇ ತಂಡದಲ್ಲಿದ್ದೇವೆ. ಅವರು ನಮ್ಮ ತಂಡದ ಪ್ರಮುಖ ಭಾಗ. ಅವರು ತಂಡದ ಪ್ರತಿಯೊಂದು ಚರ್ಚೆ ಮತ್ತು ನಿರ್ಧಾರಗಳಲ್ಲಿ ಭಾಗಿಯಾಗುತ್ತಾರೆ. ಸತತವಾಗಿ ಪಂದ್ಯಗಳನ್ನು ಸೋಲುತ್ತಿರುವಾಗ ಇಂತಹ ಟೀಕೆ, ಟಿಪ್ಪಣಿಗಳು ಸಾಮಾನ್ಯ. ಆದರೆ ಈಗ ಹಬ್ಬಿರುವುದು ಆಧಾರ ರಹಿತ ಮಾಹಿತಿ. ಇದರ ಬಗ್ಗೆ ನಾನು ಏನೂ ಹೇಳಲಾರೆ. ತಂಡದ ವಾತಾವರಣ ಉತ್ತಮವಾಗಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದರೆ ಎಷ್ಟು ನೋವುಂಟಾಗುತ್ತದೆ ಎಂದು ಜನರಿಗೆ ಅರ್ಥವಾಗುವುದಿಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ತಂಡದ 600ನೇ ಚಾರಿತ್ರಿಕ ಪಂದ್ಯಕ್ಕೆ ವರುಣನ ಅವಕೃಪೆ: ಉತ್ತಮ ಸ್ಥಿತಿಯಲ್ಲಿ ಟೀಂ ಇಂಡಿಯಾ

ಲಂಕಾ ವಿರುದ್ಧದ ಟೆಸ್ಟ್‌ಗೂ ಮುನ್ನಾ ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ, Video

ಹಾಕಿ ವಿಶ್ವಕಪ್‌ ಮಹಾಸಮರ ನಾಳೆ ಶುರು: ಚಿನ್ನದ ಪದಕದ ಕನವರಿಕೆಯಲ್ಲಿ ಟೀಂ ಇಂಡಿಯಾ

IND vs SL: ಭಾರತ, ಶ್ರೀಲಂಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

10ವರ್ಷಗಳ ಪ್ರೀತಿ, ಐವರು ಮಕ್ಕಳು ಜನಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ

ಮುಂದಿನ ಸುದ್ದಿ
Show comments