Webdunia - Bharat's app for daily news and videos

Install App

ಕೋಚ್ ಆದ ಬಳಿಕ ದ್ರಾವಿಡ್ ಮಾಡಿದ್ದ ಮೊದಲ ಕೆಲಸವೇನು ಗೊತ್ತಾ?

Webdunia
ಭಾನುವಾರ, 12 ಡಿಸೆಂಬರ್ 2021 (09:00 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಮೊದಲ ಸರಣಿಯಲ್ಲೇ ಯಶಸ್ಸು ಕಂಡಿರುವ ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಇತ್ತೀಚೆಗಿನ ಸಂದರ್ಶನದಲ್ಲಿ ವಿನೂತನ ವಿಚಾರವೊಂದನ್ನು ಹೊರಗೆಡವಿದ್ದಾರೆ.

ಕೋಚ್ ಆದ ಬಳಿಕ ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಬಳಿ ಖುದ್ದಾಗಿ ತೆರಳಿ ವೈಯಕ್ತಿಕವಾಗಿ ಮಾತನಾಡಿದ್ದರಂತೆ. ಹೀಗಂತ ರೋಹಿತ್ ಹೊಗಳಿದ್ದರು.

ದ್ರಾವಿಡ್ ಪ್ರತಿಯೊಬ್ಬ ಆಟಗಾರನ ಜೊತೆ ಸಂವಹನ ನಡೆಸುವ ರೀತಿಯಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಎಲ್ಲರೂ ಹೇಳುವಂತೆ ಒಬ್ಬ ಹೊರ ಹೋಗುವ ಆಟಗಾರನಾಗಿದ್ದರೂ ಸರಿ, ಆತನ ಜೊತೆಗೆ ಸ್ಪಷ್ಟವಾಗಿ ಅದಕ್ಕೆ ಕಾರಣ ನೀಡುವ ಮೂಲಕ ಆತನಲ್ಲೂ ಆತ್ಮವಿಶ್ವಾಸ ತುಂಬುವುದು ದ್ರಾವಿಡ್ ಶೈಲಿ. ಇದನ್ನೇ ರೋಹಿತ್ ಕೂಡಾ ಹೇಳಿದ್ದಾರೆ. ನಾಯಕನಾದ ಬಳಿಕ ಪ್ರತಿಯೊಬ್ಬ ಬ್ಯಾಟರ್, ಬೌಲರ್ ಬಳಿ ಹೋಗಿ ದ್ರಾವಿಡ್ ಅವರಿಂದ ಏನು ನಿರೀಕ್ಷೆಗಳಿವೆ, ಅವರು ಏನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರಂತೆ. ಇದರಿಂದಲೇ ತಂಡದಲ್ಲಿ ಅವರ ಕೋಚಿಂಗ್ ಶೈಲಿ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಾಂಗ್ ಕಾಂಗ್ ಮಹಿಳಾ ಕ್ರಿಕೆಟಿಗರಿಗೆ ಸ್ಮೃತಿ ಎಂದರೆ ಎಷ್ಟು ಗೌರವ ಗೊತ್ತಾ

ಹಾಂಗ್ ಕಾಂಗ್ ಬೌಲರ್ ಗಳನ್ನು ಗಲ್ಲಿ ಕ್ರಿಕೆಟ್ ನಂತೆ ಚೆಂಡಾಡಿದ ಸ್ಮೃತಿ ಮಂಧಾನ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ

ಸ್ವಲ್ಪ ಹುಕ್ಕಾ ಸೇದಿ ಬರ್ತೀನಿ': ರಿಷಭ್ ಪಂತ್ ಜೊತೆ ಪಾರ್ಟಿ ಮಾಡುತ್ತಿದ್ದ ಎಂಎಸ್ ಧೋನಿ ವೀಡಿಯೋ ವೈರಲ್

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ವಿವಿಎಸ್ ಲಕ್ಷ್ಮಣ್: ಏಷ್ಯನ್‌ ಗೇಮ್ಸ್‌ ಚಿನ್ನ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌

ರೋಹಿತ್ ಶರ್ಮಾ ಮುಂದೆ ಟೀಂ ಇಂಡಿಯಾ ಪರ ಆಡ್ತಾರಾ, ಇಂದು ಮಹತ್ವದ ನಿರ್ಧಾರ

ಮುಂದಿನ ಸುದ್ದಿ
Show comments