Select Your Language

Notifications

webdunia
webdunia
webdunia
webdunia

ರಾಹುಲ್ ಮಿಂಚಿನ ಶತಕ: ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ

ರಾಹುಲ್ ಮಿಂಚಿನ ಶತಕ:  ಜಿಂಬಾಬ್ವೆ ವಿರುದ್ಧ  ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ
ಹರಾರೆ , ಶನಿವಾರ, 11 ಜೂನ್ 2016 (19:37 IST)
ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವೆ ಹರಾರೆಯಲ್ಲಿ ನಡೆಯುತ್ತಿರುವ ಚೊಚ್ಚಲ ಏಕ ದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡದ 168 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಮುಟ್ಟುವ ಮೂಲಕ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ.  ಲೋಕೇಶ್ ರಾಹುಲ್ ಅವರ 100  ರನ್ ಮತ್ತು  ಅಂಬಾಟಿ ರಾಯ್ಡು ಅವರ 62 ರನ್‌ಗಳೊಂದಿಗೆ ಒಟ್ಟು 162 ರನ್ ಜತೆಯಾಟದಿಂದ ನಿರಾಯಾಸವಾಗಿ ಜಿಂಬಾಬ್ವೆ ಸ್ಕೋರಿನ ಗಡಿಯನ್ನು ದಾಟಿ 173 ರನ್ ಗಳಿಸಿತು. 

ಕರುಣ್ ನಾಯರ್ ಅವರು ಆರಂಭದಲ್ಲೇ ಚತಾರಾ ಬೌಲಿಂಗ್‌ನಲ್ಲಿ ರಾಜಾಗೆ ಕ್ಯಾಚಿತ್ತು ಔಟಾದ ಬಳಿಕ ಲೋಕೇಶ್ ರಾಹುಲ್ ಮತ್ತು ರಾಯುಡು ಭದ್ರವಾಗಿ ನಿಂತು ಆಡಿ ಜಿಂಬಾಬ್ವೆ ಫೀಲ್ಡರುಗಳಿಗೆ ಬೆವರಿಳಿಸಿದರು. ಜಿಂಬಾಬ್ವೆ ಬೌಲರುಗಳು ಅವರಿಬ್ಬರನ್ನು ಔಟ್ ಮಾಡುವ ಪ್ರಯತ್ನ ವಿಫಲವಾಗಿ ಸುಲಭದಲ್ಲಿ ಸೋಲನ್ನಪ್ಪಿದೆ. ಮೊದಲಿಗೆ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದ ಜೋಡಿ ನಂತರ  ಬಿರುಸಿನ ಹೊಡೆತಗಳಿಗೆ ಆರಂಭಿಸಿತು.

ರಾಯುಡುಗಿಂತ ಕರ್ನಾಟಕದ ಲೋಕೇಶ್ ರಾಹುಲ್ ವೇಗವಾಗಿ ರನ್ ಸ್ಕೋರ್ ಮಾಡಿದರು.  ರಾಹುಲ್ ಬಗ್ಗೆ ಆಯ್ಕೆದಾರರು ಇರಿಸಿದ್ದ ಭರವಸೆಯನ್ನು ಅವರು ಹುಸಿ ಮಾಡಲಿಲ್ಲ. ಐಪಿಎಲ್‌ನಲ್ಲೂ ಆರ್‌ಸಿಬಿ ಪರ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.  ರಾಹುಲ್ ಶತಕದಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಭಾರತ, ಜರ್ಮನಿ ವಿರುದ್ಧ 3-3 ಡ್ರಾಗೆ ತೃಪ್ತಿ