ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಶುಕ್ರವಾರ ಭಾರತ ಚಾಂಪಿಯನ್ಸ್ ಟ್ರೋಫಿ ಹಾಕಿ ಅಭಿಯಾನವನ್ನು ರೋಚಕ ಹಣಾಹಣಿಯ 3-3 ಡ್ರಾದೊಂದಿಗೆ ತೃಪ್ತಿಪಡೆದುಕೊಂಡಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಜರ್ಮನಿ 2 ಗೋಲುಗಳಿಂದ ಹಿಂದಿತ್ತು. ಆದರೆ ಭಾರತ ಕೊನೆಯ ಮೂರು ನಿಮಿಷಗಳಲ್ಲಿ ಚೆಂಡಿನ ಮೇಲಿನ ಹಿಡಿತ ಕಳೆದುಕೊಂಡು ಡ್ರಾಗೆ ತೃಪ್ತಿಪಡಬೇಕಾಯಿತು. ಮೊದಲಿಗೆ ವಿ. ಆರ್. ರಘುನಾಥ್ ಪೆನಾಲ್ಟಿ ಕಾರ್ನರ್‌ವೊಂದನ್ನು ಗೋಲಾಗಿಸಿ 1-0 ಮುನ್ನಡೆಯನ್ನು ಭಾರತ ಗಳಿಸಿತು.
ಜರ್ಮನಿ 24 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ವಿಫಲಗೊಳಿಸಿತು. 2 ನಿಮಿಷಗಳ ನಂತರ ಜರ್ಮನಿಯ ಟಾಮ್ ಗ್ರಾಮ್‌ಬಶ್ಚ್ ಪೆನಾಲ್ಟಿ ಕಾರ್ನರ್ ಗೋಲಾಗಿಸಿದರು. ಆದರೆ ಅವರ ಸಂತಸ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಿಡ್ ಫೀಲ್ಡರ್ ಮಂದೀಪ್ ಸಿಂಗ್ ಮನೋಜ್ಞ ಗೋಲಿನ ಮೂಲಕ ಭಾರತ 2-1 ಮುನ್ನಡೆ ಸಾಧಿಸಿತು. ವಿರಾಮದ ನಂತರ ಭಾರತ 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಮತ್ತೊಂದು ಗೋಲನ್ನು ಬಾರಿಸಿದರು. ಗ್ರಾಮ್‌ಬಶ್ಚ್ ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿಸಿ ಜರ್ಮನಿ ಮತ್ತೊಂದು ಪಾಯಿಂಟ್ ಗಳಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ 3-2ರಿಂದ ಮುನ್ನಡೆ ಸಾಧಿಸಿತ್ತು.
ನಾಲ್ಕನೇ ಕ್ವಾರ್ಟರ್‌ನ 52ನೇ ನಿಮಿಷದಲ್ಲಿ ಮಂದೀಪ್ ಗೋಲು ಗಳಿಸುವ ಅವಕಾಶ ಕಳೆದುಕೊಂಡರು. ಜೋನಾಸ್ ಗೋಮಾಲ್ ಅವರ ಪೆನಾಲ್ಟಿ ಸ್ಟ್ರೋಕ್‌ನಿಂದ ಅಂತಿಮ ನಿಮಿಷಗಳಲ್ಲಿ ಜರ್ಮನಿ ಸ್ಕೋರನ್ನು 3-3ರಿಂದ ಸಮಗೊಳಿಸಿತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ