Select Your Language

Notifications

webdunia
webdunia
webdunia
webdunia

ಮೊನಚಾದ ಬೌಲಿಂಗ್ ಮೂಲಕ ಭಾರತವನ್ನು ಗೆಲ್ಲಿಸಿದ ಸಚಿನ್

sachin tendulkar
ನವದೆಹಲಿ: , ಶನಿವಾರ, 11 ಜೂನ್ 2016 (15:31 IST)
ಸಚಿನ್ ತೆಂಡೂಲ್ಕರ್ ತಮ್ಮ  ವೃತ್ತಿಜೀವನದಲ್ಲಿ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಈಗಲೂ ನೆನಪಿಸಿಕೊಂಡರೆ ಮೈನವಿರೇಳಿಸುತ್ತದೆ. ಆದರೆ ಸಚಿನ್ ತಮ್ಮ ಮೊನಚಾದ ಬೌಲಿಂಗ್‌ನಿಂದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿ ಭಾರತಕ್ಕೆ ವಿಜಯ ತಂದಿತ್ತಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ 1993ರ ಹೀರೊ ಕಪ್ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಕೊನೆಯ ಓವರಿನಲ್ಲಿ ಗೆಲ್ಲುವುದಕ್ಕೆ 6 ರನ್ ಬೇಕಾಗಿತ್ತು. ಸಚಿನ್ ಕೊನೆಯ ಓವರ್ ಬೌಲ್ ಮಾಡಲು ಆಸಕ್ತಿ ತೋರಿದ್ದರಿಂದ ನಾಯಕ ಅಜರುದ್ದೀನ್ ಅವರತ್ತ ಚೆಂಡನ್ನು ಎಸೆದು ಬೌಲಿಂಗ್‌ಗೆ ಸೂಚಿಸಿದ್ದರು.
 
ಬ್ಯಾಟಿಂಗ್ ಮಾಸ್ಟರ್ ತಮ್ಮ  ವೈವಿಧ್ಯಮಯ ಎಸೆತಗಳ ಮೂಲಕ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದರಿಂದ ಭಾರತ 2 ರನ್ ಅಂತರದಿಂದ ಗೆಲುವು ಗಳಿಸಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್‌ನಲ್ಲಿ ಕೊಹ್ಲಿ ಮೈಲಿಗಲ್ಲು: 11 ದಶಲಕ್ಷ ಹಿಂಬಾಲಕರು