Select Your Language

Notifications

webdunia
webdunia
webdunia
webdunia

ಟ್ವಿಟರ್‌ನಲ್ಲಿ ಕೊಹ್ಲಿ ಮೈಲಿಗಲ್ಲು: 11 ದಶಲಕ್ಷ ಹಿಂಬಾಲಕರು

virat kohli
ನವದೆಹಲಿ , ಶನಿವಾರ, 11 ಜೂನ್ 2016 (14:18 IST)
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮೈದಾನದ ಹೊರಗೆ ಇನ್ನೊಂದು ಮೈಲಿಗಲ್ಲನ್ನು ಮುಟ್ಟಿದ್ದಾರೆ. ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ 11 ದಶಲಕ್ಷ ಹಿಂಬಾಲಕರನ್ನು ಕೊಹ್ಲಿ ಮುಟ್ಟಿದ್ದಾರೆ.   ಬ್ಯಾಟ್ಸ್‌ಮನ್ ಕೊಹ್ಲಿ ಜನಪ್ರಿಯತೆ ಸಾಮಾಜಿಕ ಜಾಲತಾಣದಲ್ಲಿ ದಾಖಲೆಯ ವೇಗದಲ್ಲಿ ಏರುತ್ತಿದ್ದು, ಭಾರತ ಸೀಮಿತ ಓವರುಗಳ ನಾಯಕ ಧೋನಿಯನ್ನು ಹಿಂದಿಕ್ಕಿದ್ದಾರೆ.

ಭಾರತದ ಬ್ಯಾಟಿಂಗ್ ಲೈನ್ ಅಪ್ ಬೆನ್ನೆಲುಬಾಗಿರುವ ಕೊಹ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ ಅವರಿಗಿಂತ ಸ್ವಲ್ಪ ಹಿಂದಿದ್ದಾರೆ. ಸಚಿನ್ 11.10 ದಶಲಕ್ಷ ಅನುಯಾಯಿಗಳನ್ನು ಟ್ವಿಟರ್‌ನಲ್ಲಿ ಹೊಂದಿದ್ದಾರೆ.
 
 11 ದಶಲಕ್ಷ ಫಾಲೋವರ್ಸ್ ಗಡಿಯನ್ನು ದಾಟಿದ ಬಳಿಕ ಕೊಹ್ಲಿ ಸೆಲ್ಫೀಯೊಂದಿಗೆ ಟ್ವೀಟ್ ಮಾಡಿದ್ದು, ಅಭಿಮಾನಿಗಳಿಗೆ ಧನ್ಯವಾದ ಸೂಚಿಸಿದ್ದಾರೆ. ಟ್ವಿಟರ್‌ನಲ್ಲಿ ಕೊಹ್ಲಿ ಹಿಂಬಾಲಕರು 11 ದಶಲಕ್ಷ, ಸಚಿನ್ ತೆಂಡೂಲ್ಕರ್ ಹಿಂಬಾಲಕರು 11.10 ದಶಲಕ್ಷ ಮತ್ತು ಧೋನಿಗೆ 5.45 ದಶಲಕ್ಷವಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಸೂಪರ್ ಸೀರೀಸ್ ಫೈನಲ್‌ಗೆ ಸೈನಾ ನೆಹ್ವಾಲ್ ಲಗ್ಗೆ