ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವ ನಂ.2 ಚೀನಾದ ಯಿಹಾನ್ ವಾಂಗ್ ಅವರನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಫೈನಲ್ಸ್‌ಗೆ ಲಗ್ಗೆ ಹಾಕಿದ್ದಾರೆ. ರಿಯೊ ಕ್ರೀಡಾಕೂಟದ ಅಭಿಯಾನಕ್ಕೆ ಮುಂಚೆ ಈ ಗೆಲುವು ಸೈನಾಗೆ ಚೇತರಿಕೆ ನೀಡಿದೆ. ಸೈನಾ 2011ರ ವಿಶ್ವಚಾಂಪಿಯನ್ ಮತ್ತು 2012ರ ಒಲಿಂಪಿಕ್ ರಜತ ಪದಕ ವಿಜೇತೆ ನಾಲ್ಕನೇ ಸೀಡ್ ಇಹಾನ್ ಅವರನ್ನು 21-8, 21-12 ಸೆಟ್‌ಗಳಿಂದ ಸೆಮಿಫೈನಲ್ಸ್‌ನಲ್ಲಿ ಸೋಲಿಸಿದರು.
ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 12 ಚೀನಾದ ಸುನ್ ಯು ಅವರನ್ನು ಸೈನಾ ಎದುರಿಸಲಿದ್ದಾರೆ.
ಹೈದರಾಬಾದಿನ ಆಟಗಾರ್ತಿ ಸೈನಾ 2014ರಲ್ಲಿ ಆಸ್ಟ್ರೇಲಿಯನ್ ಓಪನ್ ವಿಜೇತರಾಗಿದ್ದು, ಸುನ್ ವಿರುದ್ಧ 5-1ರ ಮುಖಾಮುಖಿ ದಾಖಲೆ ನಿರ್ಮಿಸಿದ್ದು, 2013ರ ಚೀನಾ ಓಪನ್ ಪಂದ್ಯಾವಳಿಯಲ್ಲಿ ಮಾತ್ರ ಸೈನಾ ವಿರುದ್ಧ ಸುನ್ ಜಯಗಳಿಸಿದ್ದರು.
ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಡೆನ್ಮಾರ್ಕ್ ಹ್ಯಾನ್ಸ್ ಕ್ರಿಸ್ಟಿಯನ್ ವಿರುದ್ಧ ಸೆಮಿಫೈನಲ್ ಹೋರಾಟದಲ್ಲಿ ಸೋತರು. ಸೈನಾ ನೆಹ್ವಾಲ್ ಆರಂಭದ ಸೆಟ್‌ನಲ್ಲಿ ಮೇಲುಗೈ ಸಾಧಿಸಿ ಯಿಹಾನ್ ವಿರುದ್ಧ 15-6 ಮುನ್ನಡೆ ಸಾಧಿಸಿದರು. ಶೀಘ್ರ ಚಲನೆ ಮತ್ತು ಸ್ಮಾಷ್ ಮತ್ತು ಸರ್ವ್‌ಗಳ ಮೂಲಕ ಸೈನಾ ಮೊದಲ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಕೂಡ ಅದೇ ತೀವ್ರತೆ ಮುಂದುವರಿಸಿ 21-12ರಿಂದ ಸೆಟ್ ಗೆದ್ದುಕೊಂಡರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ