ಸಿಡ್ನಿ: ಇತ್ತೀಚೆಗಷ್ಟೇ ಮುಕ್ತಾಯವಾದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಬೀಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಾಯಕ ಪ್ಯಾಟ್ ಕ್ಯುಮಿನ್ಸ್ ಗೆ ಎಂಥಾ ಸ್ವಾಗತ ಸಿಕ್ಕಿದೆ ನೋಡಿ! 
									
			
			 
 			
 
 			
					
			        							
								
																	ವಿಶ್ವ ಚಾಂಪಿಯನ್ ಆದ ಖುಷಿಯಲ್ಲಿ ಆಸೀಸ್ ನಾಯಕ ಪ್ಯಾಟ್ ಕ್ಯುಮಿನ್ಸ್ ಭಾರತದಿಂದ ತವರಿಗೆ ಬಂದಿಳಿದಾಗ ಅವರ ಸ್ವಾಗತಕ್ಕೆ ಯಾರೂ ಇರಲಿಲ್ಲ! ವಿಮಾನ ನಿಲ್ದಾಣದಲ್ಲಿ ಕ್ಯುಮಿನ್ಸ್ ಬಂದಿಳಿದಾಗ ಒಂದಿಬ್ಬರು ಪತ್ರಕರ್ತರು ಫೋಟೋ ತೆಗೆಯುತ್ತಿದ್ದುದು ಬಿಟ್ಟರೆ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ.
									
										
								
																	ಆಸ್ಟ್ರೇಲಿಯಾ ಇದು ಆರನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಶಿಪ್ ಗೆಲ್ಲುತ್ತಿದೆ. ಹಾಗಿದ್ದರೂ ಆಸ್ಟ್ರೇಲಿಯಾದಲ್ಲಿ ಇದಕ್ಕೆ ವಿಶೇಷ ಕಿಮತ್ತೇನೂ ಇಲ್ಲ ಎಂಬುದು ಇದರಲ್ಲಿಯೇ ಗೊತ್ತಾಗುತ್ತದೆ.
									
											
							                     
							
							
			        							
								
																	ಇದೇ ಒಂದು ವೇಳೆ ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆದ್ದಿದ್ದರೆ ರೋಹಿತ್ ಬಳಗಕ್ಕೆ ಯಾವ ಬಗೆಯ ಸ್ವಾಗತ ಇರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ‍್ಯವಿಲ್ಲ. ಭಾರತದಲ್ಲಿ ಕ್ರಿಕೆಟ್ ನ್ನು ಧರ್ಮದಂತೆ ಪ್ರೀತಿಸುತ್ತಾರೆ. ಒಂದು ವೇಳೆ ವಿಶ್ವಕಪ್ ಗೆದ್ದಿದ್ದರೆ ಆಟಗಾರರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ಇದು ಯಾವುದೂ ಲೆಕ್ಕಕ್ಕೇ ಇಲ್ಲ ಎಂಬುದು ಈ ಘಟನೆಯೇ ಹೇಳುತ್ತಿದೆ.