ಅಹಮ್ಮದಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 191 ರನ್ ಗಳಿಗೆ ಆಲೌಟ್ ಆಗಿದೆ.
ಆರಂಭದಲ್ಲಿ ಪಾಕ್ ಉತ್ತಮ ಆರಂಭ ಪಡೆದಿದ್ದರೂ ಅದನ್ನು ಕೊನೆಯವರೆಗೆ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ವಿಶೇಷವಾಗಿ ಒಂದು ಹಂತದಲ್ಲಿ 155 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಪಾಕ್ ಬಳಿಕ 36 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತು! ಸೂಕ್ತ ಸಮಯದಲ್ಲಿ ಬೌಲರ್ ಗಳನ್ನು ಬದಲಾವಣೆ ಮಾಡಿದ ರೋಹಿತ್ ಶರ್ಮಾ ಕ್ಯಾಪ್ಟನ್ಸಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಯಿತು. ಅಲ್ಲದೆ ಒಂದು ಕರಾರುವಾಕ್ ಡಿಆರ್ ಎಸ್ ಕೂಡಾ ರೋಹಿತ್ ಗೆ ಪ್ಲಸ್ ಪಾಯಿಂಟ್ ಆಯಿತು.
ಪಾಕಿಸ್ತಾನ ಪರ ನಾಯಕ ಬಾಬರ್ ಅಜಂ 50, ರಿಜ್ವಾನ್ 49, ಇಮಾಮ್ ಉಲ್ ಹಕ್ 36 ರನ್ ಗಳಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ ಬಿಟ್ಟರೆ ಉಳಿದೆಲ್ಲಾ ಬೌಲರ್ ಗಳು ತಲಾ 2 ವಿಕೆಟ್ ಕಬಳಿಸಿದರು. ಇದೀಗ ಭಾರತ ಬ್ಯಾಟಿಂಗ್ ಆರಂಭಿಸಿದ್ದು ಶುಬ್ಮನ್ ಗಿಲ್ (16) ವಿಕೆಟ್ ಕಳೆದುಕೊಂಡು 5 ಓವರ್ ಗಳಲ್ಲಿ 33 ರನ್ ಗಳಿಸಿದೆ.