ಅಹಮ್ಮದಾಬಾದ್: ಏಕದಿನ ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಡೆಂಗ್ಯೂದಿಂದ ಚೇತರಿಸಿಕೊಂಡ ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಇಂದಿನ ಪಂದ್ಯವನ್ನು ಆಡುವುದು ಶೇ.99 ರಷ್ಟು ಖಚಿತ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಶುಬ್ಮನ್ ಗಿಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನವೇ ಅವರಿಗೆ ಡೆಂಗ್ಯೂ ತಗುಲಿದ್ದರಿಂದ ಮೊದಲ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೆ ಈಗ ಪಾಕಿಸ್ತಾನದ ವಿರುದ್ಧದ ಬಿಗ್ ಮ್ಯಾಚ್ ಗೆ ಗಿಲ್ ಉಪಸ್ಥಿತಿ ಮುಖ್ಯವಾಗಿದೆ.
ಇದರ ಬೆನ್ನಲ್ಲೇ ನಿನ್ನೆ ರೋಹಿತ್ ಈ ಬಗ್ಗೆ ಮಾತನಾಡಿದ್ದು, ಗಿಲ್ ಆಡುವುದು ಶೇ.99 ರಷ್ಟು ಖಚಿತ ಎಂದಿದ್ದಾರೆ. ಗಿಲ್ ಅಹಮ್ಮದಾಬಾದ್ ಮೈದಾನದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಈ ಮೈದಾನದಲ್ಲಿ ಒಂದು ಟೆಸ್ಟ್, ಟಿ20 ಯ ಚೊಚ್ಚಲ ಶತಕ, ಐಪಿಎಲ್ ನಲ್ಲಿ ಎರಡು ಶತಕ ದಾಖಲಿಸಿದ್ದಾರೆ. ಹೀಗಾಗಿ ಗಿಲ್ ತಂಡಕ್ಕೆ ಕಮ್ ಬ್ಯಾಕ್ ಮಾಡುವ ವಿಚಾರ ಪಾಕಿಗಳಿಗೆ ನಡುಕ ಹುಟ್ಟಿಸುವುದು ಗ್ಯಾರಂಟಿ.