2019 ರ ವಿಶ್ವಕಪ್ ಗೆಲ್ಲುವವರು ನಾವೇ ಎಂದ ಪಾಕ್ ಕ್ರಿಕೆಟಿಗ

ಭಾನುವಾರ, 26 ಆಗಸ್ಟ್ 2018 (09:32 IST)
ಇಸ್ಲಾಮಾಬಾದ್: 2019 ರ ವಿಶ್ವಕಪ್ ಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟಿಗ ಫಕರ್ ಝಮಾನ್ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ನಮ್ಮದೇ ಎಂದಿದ್ದಾರೆ.

‘ನಾವು ಇಂಗ್ಲೆಂಡ್ ಗೆ ವಿಶ್ವಕಪ್ ಗೆಲ್ಲಲೆಂದೇ ಪ್ರವಾಸ ಮಾಡಲಿದ್ದೇವೆ. ಬದಲಾಗಿ ಕೇವಲ ನಾಮಕಾವಸ್ಥೆಗೆ ಹೋಗುತ್ತಿಲ್ಲ. ನಮ್ಮ ತಂಡ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಲಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಳ್ಳಲಿದೆ’ ಎಂದು ಪಾಕ್ ಬ್ಯಾಟ್ಸ್ ಮನ್ ಹೇಳಿಕೊಂಡಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಫಕರ್ ಝಮಾನ್ ತಮ್ಮ ತಂಡ ಅನೇಕ ಬಾರಿ ಗೆಲ್ಲಲು ಕಾರಣವಾಗಿದ್ದರು. ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ನಂತರ 2019 ರ ವಿಶ್ವಕಪ್ ಗೆ ತಮ್ಮ ತಯಾರಿ ಆರಂಭಿಸುವುದಾಗಿ ಫಕರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಗಳ ಟಿಕೆಟ್ ಪಡೆಯೋದು ಹೇಗೆ?