Select Your Language

Notifications

webdunia
webdunia
webdunia
webdunia

ಭಾರತದ ಜೊತೆ ಕ್ರಿಕೆಟ್ ಸರಣಿ ಆಡಲು ಪಾಕ್ ಶತಪ್ರಯತ್ನ

ಭಾರತದ ಜೊತೆ ಕ್ರಿಕೆಟ್ ಸರಣಿ ಆಡಲು ಪಾಕ್ ಶತಪ್ರಯತ್ನ
ಇಸ್ಲಾಮಾಬಾದ್ , ಬುಧವಾರ, 16 ಮಾರ್ಚ್ 2022 (11:39 IST)
ಇಸ್ಲಾಮಾಬಾದ್: ಆರ್ಥಿಕವಾಗಿ ಅಧೋಗತಿಯಲ್ಲಿರುವ ಪಾಕ್ ಕ್ರಿಕೆಟ್ ಮಂಡಳಿ ಈಗ ಬೇರೆ ದೇಶಗಳನ್ನು ತನ್ನ ದೇಶಕ್ಕೆ ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಅದರಲ್ಲೂ ಭಾರತದ ಜೊತೆಗೆ ಕ್ರಿಕೆಟ್ ಆಡುವ ಪ್ರಯತ್ನ ನಡೆಸುತ್ತಲೇ ಇದೆ.

ಕೆಲವು ದಿನಗಳ ಮೊದಲು ಪಾಕ್ ಕ್ರಿಕೆಟ್ ಮಂಡಳಿ ಭಾರತ-ಪಾಕ್ ಸೇರಿದಂತೆ ನಾಲ್ಕು ರಾಷ್ಟ್ರಗಳ ಕ್ರಿಕೆಟ್ ಸರಣಿ ಆಡುವ ಪ್ರಸ್ತಾಪವನ್ನು ಬಿಸಿಸಿಐ ಕ್ರಿಕೆಟ್ ಕಾರ್ಯದರ್ಶಿ ಜಯ್ ಶಾ ಮುಂದಿಟ್ಟಿತ್ತು. ಆದರೆ ಜಯ್ ಶಾ ಈ ಆಹ್ವಾನವನ್ನು ತಿರಸ್ಕರಿಸಿದ್ದರು.

ಆದರೆ ಪಾಕ್ ಇಷ್ಟಕ್ಕೇ ಸುಮ್ಮನಾಗಿಲ್ಲ. ಮಾರ್ಚ್ 19 ರಂದು ದುಬೈನಲ್ಲಿ ನಡೆಯಲಿರುವ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಜೊತೆ  ಕ್ರಿಕೆಟ್ ಸರಣಿ ಆಡುವ ಬಗ್ಗೆ ಚರ್ಚಿಸುವುದಾಗಿ ಪಾಕ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ. ಕ್ರಿಕೆಟ್ ನಲ್ಲಿ ರಾಜಕೀಯ ಬೆರೆಸಬಾರದು. ಅಭಿಮಾನಿಗಳಿಗೆ ಭಾರತ-ಪಾಕ್ ನಡುವಿನ ರೋಚಕ ಸರಣಿಯಿಂದ ವಂಚಿತರಾಗಿಸುವುದು ತಪ್ಪು ಎಂದು ರಮೀಜ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಗಾಗಿ ಟೀಂ ಇಂಡಿಯಾ ಆಟಗಾರರ ಕ್ವಾರಂಟೈನ್ ಶುರು