Webdunia - Bharat's app for daily news and videos

Install App

Pahalgam Attack, ಪಾಕ್‌ ಜತೆಗಿನ ಎಲ್ಲ ಕ್ರಿಕೆಟ್ ಸಂಬಂಧ ಮುರಿಯಬೇಕು: ಮಾಜಿ ಕ್ರಿಕೆಟಿಗ ಸೌರವ್ ಗಂಗೋಲಿ ಒತ್ತಾಯ

Sampriya
ಶನಿವಾರ, 26 ಏಪ್ರಿಲ್ 2025 (17:58 IST)
Photo Credit X
ಬೆಂಗಳೂರು: ಕಾಶ್ಮೀರ ಕಣಿವೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಸಂಬಂಧ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಪ್ರತಿಕ್ರಿಯಿಸಿ, ಭಾರತವು ಪಾಕಿಸ್ತಾನದೊಂದಿಗಿನ ತನ್ನ ಎಲ್ಲಾ ಕ್ರಿಕೆಟ್ ಸಂಬಂಧಗಳನ್ನು ಮುರಿಯುವ ಮೂಲಕ ತಿರುಗೇಟು ನೀಡಬೇಕೆಂದು ಹೇಳಿದರು.

ಅದಲ್ಲದೆ ಐಸಿಸಿ ಮತ್ತು ಏಷ್ಯನ್ ಪಂದ್ಯಾವಳಿಗಳಲ್ಲಿ ಕೂಡ ಪಾಕ್‌ ಜತೆ ಪಂದ್ಯಾಟವನ್ನು ಎದುರಿಸಬಾರದು ಎಂದರು.

ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ, ಪ್ರತಿ ವರ್ಷವೂ ಭಾರತದ ನೆಲದಲ್ಲಿ ಕೆಲವು ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ಇನ್ನು ಮುಂದೆ ಸಹಿಸಬಾರದು ಎಂದು ಹೇಳಿದರು.

ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಮುರಿದು ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಪ್ರತಿ ವರ್ಷವೂ ಪಾಕ್‌ನ ಉಗ್ರರು ನಡೆಸುತ್ತಿರುವ ದಾಳಿ ತಮಾಷೆಯಾಗಿ ಬಿಟ್ಟಿದೆ. ಇನ್ಮುಂದೆ ಭಯೋತ್ಪಾದನೆಯನ್ನು ಸಾಯಿಸಲು ಸಾಧ್ಯವಿಲ್ಲ ಎಂದರು.

ಏಪ್ರಿಲ್ 22 ರಂದು ಭಾರತದ ನೆಲದಲ್ಲಿ ಮತ್ತೊಮ್ಮೆ ಭಯೋತ್ಪಾದನೆ ಸಂಭವಿಸಿತು, ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲುಗಳಲ್ಲಿ ಐದರಿಂದ ಆರು ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದರು ಮತ್ತು ಅನೇಕರು ಗಾಯಗೊಂಡರು. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಯೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ಭಯೋತ್ಪಾದಕ ಗುಂಪು ರೆಸಿಸ್ಟೆನ್ಸ್ ಫೋರ್ಸ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

DC vs RCB Match: ಫ್ಯಾನ್ಸ್‌ ಕಾದಿದ್ದ ದಿನಕ್ಕೆ ಕ್ಷಣಗಣನೆ ಶುರು, ಕಿಂಗ್ ಕೊಹ್ಲಿ, ಕೆಎಲ್‌ ರಾಹುಲ್‌ಗೆ ಕೊಡ್ತಾರಾ ಕೌಂಟರ್‌

Sania Mirza: ಮುಂದೆ ಮೂರು ಬಾರಿ ಗರ್ಭಿಣಿಯಾಗಬಲ್ಲೆ, ಆದರೆ ಇದೊಂದು ಕೆಲಸ ಸಾಧ್ಯವಿಲ್ಲ ಎಂದ ಸಾನಿಯಾ ಮಿರ್ಜಾ

Kavya Maran video: ನಿಮ್ಮಜ್ಜಿ.. ಕ್ಯಾಚ್ ಬಿಟ್ರಲ್ಲೋ.. ಕಾವ್ಯಾ ಮಾರನ್ ಎಕ್ಸ್ ಪ್ರೆಷನ್ ಗೇ ಒಂದು ಕ್ಯಾಮರಾ ಇಡಬೇಕು

Sania Mirza: ಭಾರತದಲ್ಲಿ ಪಾಕಿಸ್ತಾನಿಯರಿಗೆ ಜಾಗ ಇಲ್ಲ: ಕೇಂದ್ರದ ನಿರ್ಧಾರದಿಂದ ಸಾನಿಯಾ ಮಿರ್ಜಾ ಪುತ್ರನಿಗೂ ತೊಂದರೆಯಾಗುತ್ತಾ

IPL 2025: 400ನೇ ಪಂದ್ಯದಲ್ಲೂ ಮಹೇಂದ್ರಸಿಂಗ್‌ ಧೋನಿಗೆ ನಿರಾಸೆ: ಪ್ಲೇ ಆಫ್‌ ರೇಸ್‌ನಿಂದಲೇ ಚೆನ್ನೈ ತಂಡ ಔಟ್‌

ಮುಂದಿನ ಸುದ್ದಿ
Show comments