ರಿಷಬ್ ಪಂತ್ ಕಾರು ಅಪಘಾತಕ್ಕೆ ಒಂದು ವರ್ಷ: ಲೇಟೆಸ್ಟ್ ಫೋಟೋ ಹಂಚಿಕೊಂಡ ಕ್ರಿಕೆಟಿಗ

Webdunia
ಶನಿವಾರ, 30 ಡಿಸೆಂಬರ್ 2023 (11:32 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತಕ್ಕೀಡಾಗಿ ಇಂದಿಗೆ ಒಂದು ವರ್ಷವಾಗಿದೆ. ಈಗ ತನ್ನ ಪರಿಸ್ಥಿತಿ ಬಗ್ಗೆ ರಿಷಬ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ದೆಹಲಿ-ಡೆಹ್ರಾಡೂನ್ ರಸ್ತೆಯಲ್ಲಿ ತಡ ರಾತ್ರಿ ತಮ್ಮ ಮನೆಗೆ ತೆರಳುತ್ತಿದ್ದಾಗ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ರಿಷಬ್ ಗಂಭೀರ ಗಾಯಗೊಂಡಿದ್ದರು. ಆಗ ಅವರ ಜೊತೆ ಬೇರೆ ಯಾರೂ ಇರಲಿಲ್ಲ. ಕೊನೆಗೆ ರಸ್ತೆಯಲ್ಲೇ ಸಾಗುತ್ತಿದ್ದ ಬಸ್ ಚಾಲಕ ಮತ್ತು ನಿರ್ವಾಹಕ ರಿಷಬ್ ಪಂತ್ ರನ್ನು ಗುರುತಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಅದೃಷ್ಟವಶಾತ್ ಅವರ ಪ್ರಾಣ ಉಳಿದಿತ್ತು. ಆದರೆ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು.

ಈ ಘಟನೆ ಕ್ರಿಕೆಟ್ ಲೋಕವನ್ನೇ ಬೆಚ್ಚಿಬೀಳಿಸಿತ್ತು. ಘಟನೆಯಲ್ಲಿ ರಿಷಬ್ ಕಾಲು ಮುರಿತಕ್ಕೊಳಗಾಗಿದ್ದರು. ಅಲ್ಲದೆ, ಕೈ, ಬೆನ್ನಿಗೂ ಏಟಾಗಿತ್ತು. ಬಳಿಕ ಮುಂಬೈನಲ್ಲಿ ತಜ್ಞ ವೈದ್ಯರು ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು.

ಶಸ್ತ್ರಚಿಕಿತ್ಸೆಗೊಳಗಾದ ಆರೇ ತಿಂಗಳಲ್ಲಿ ಮತ್ತೆ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಿಕೊಳ್ಳುವಷ್ಟು ಸುಧಾರಿಸಿದ್ದರು. ಇದೀಗ ಅವರು ಗುಣಮುಖರಾಗಿದ್ದು, ಇನ್ನೂ 100% ಫಿಟ್ ಆಗಿಲ್ಲ. ಹೀಗಾಗಿ ಈ ಬಾರಿ ಐಪಿಎಲ್ ನಲ್ಲಿ ಅವರು ಭಾಗಿಯಾಗುವುದು ಇನ್ನೂ ಅನುಮಾನವಾಗಿದೆ.

ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಿಷಬ್ ತಾವು ಇನ್ನೂ 100% ಫಿಟ್ ಆಗಿಲ್ಲ. ಚೇತರಿಕೆಯ ಹಂತದಲ್ಲಿದ್ದೇನಷ್ಟೇ ಎಂದು ಮೊಣಕಾಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಬ್ಬಾ ಕೊಹ್ಲಿ ಬೆನ್ನು ತಟ್ಟಿದರೂ ಇಷ್ಟೊಂದು ಆಟಿಟ್ಯೂಡ್ ತೋರಿಸ್ತಾರಾ ಹರ್ಪ್ರೀತ್ ಬ್ರಾರ್ Video

IPL 2026: ಪಂಜಾಬ್‌ ವಿರುದ್ಧ ಗೆದ್ದು ಪ್ಲೇ–ಆಫ್‌ಗೆ ಲಗ್ಗೆ ಹಾಕಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

RCB VS PBKS: ಟಾಸ್‌ ಗೆದ್ದ ಪಂಜಾಬ್‌, ಬೌಲಿಂಗ್ ಆಯ್ಕೆ

ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡಿದಳು: ಪತ್ನಿ ಅನುಷ್ಕಾ ತಂದ ಬದಲಾವಣೆ ಬಗ್ಗೆ ವಿರಾಟ್ ಕೊಹ್ಲಿ ಮಾತು

IPL 2026: ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿಗೆ ಇಂದು ಮಹತ್ವದ ಪಂದ್ಯ: ಗೆದ್ದರೆ ಪ್ಲೇಆಫ್‌ ಸ್ಥಾನ ಫಿಕ್ಸ್‌

ಮುಂದಿನ ಸುದ್ದಿ
Show comments