Select Your Language

Notifications

webdunia
webdunia
webdunia
webdunia

INDvsSA test: ಆಫ್ರಿಕಾ ವಿರುದ್ಧ ಸೋಲಿನಿಂದ ಟೀಂ ಇಂಡಿಯಾಗೆ ಭಾರೀ ನಷ್ಟ

INDvsSA test: ಆಫ್ರಿಕಾ ವಿರುದ್ಧ ಸೋಲಿನಿಂದ ಟೀಂ ಇಂಡಿಯಾಗೆ ಭಾರೀ ನಷ್ಟ
ಸೆಂಚೂರಿಯನ್ , ಶುಕ್ರವಾರ, 29 ಡಿಸೆಂಬರ್ 2023 (11:30 IST)
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿರುವುದು ತಂಡಕ್ಕೆ ಭಾರೀ ದೊಡ್ಡ ನಷ್ಟವಾಗಿದೆ.

ಆಫ್ರಿಕಾ ವಿರುದ್ಧ ಹೀನಾಯಗಾಗಿ ಇನಿಂಗ್ಸ್ ಅಂತರದಿಂದ ಸೋತ ಭಾರತಕ್ಕೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರೀ ಹಿನ್ನಡೆಯಾಗಿದೆ. ಈ ಸರಣಿ ಭಾರತದ ಪಾಲಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಮಹತ್ವದ್ದಾಗಿತ್ತು. ಆದರೆ  ಸೋತಿರುವುದರಿಂದ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ.

ಮೊದಲನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಈ ಸೋಲಿನೊಂದಿಗೆ ಐದನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಏಳನೇ ಸ್ಥಾನದಲ್ಲಿದ್ದ ದ.ಆಫ್ರಿಕಾ ಸೀದಾ ಮೊದಲನೇ ಸ್ಥಾನಕ್ಕೆ ಏರಿಕೆಯಾಗಿದೆ.

ವಿಪರ್ಯಾಸವೆಂದರೆ ಭಾರತದ ಸ್ಥಾನ ಈಗ ಬಾಂಗ್ಲಾದೇಶಕ್ಕಿಂತಲೂ ಕಳಪೆಯಾಗಿದೆ. ಬಾಂಗ್ಲಾ ಮೂರನೇ ಸ್ಥಾನದಲ್ಲಿದೆ. ಇದೀಗ ಭಾರತಕ್ಕೆ ಮುಂದಿನ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರನೌಟ್ ಆಗಿದ್ದಕ್ಕೆ ಬುಮ್ರಾ ಸಿಟ್ಟು: ಪಂದ್ಯದ ಬಳಿಕ ಸಮಾಧಾನಪಡಿಸಿದ ವಿರಾಟ್ ಕೊಹ್ಲಿ