Webdunia - Bharat's app for daily news and videos

Install App

ಮತ್ತೆ ಅಂತರ್ಜಾಲದಲ್ಲಿ ಭಾರೀ ಸಂಚಲನ ಉಂಟುಮಾಡುತ್ತಿರುವ ವಿರುಷ್ಕಾ ಜೋಡಿ...!!

ನಾಗಶ್ರೀ ಭಟ್
ಬುಧವಾರ, 21 ಫೆಬ್ರವರಿ 2018 (13:50 IST)
ಭಾರತದಲ್ಲಿ ಅತಿ ಹೆಚ್ಚು ಪ್ರೀತಿಗೆ ಪಾತ್ರವಾಗಿರುವ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರದ್ದು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಇವರು ಸುದ್ದಿಯಲ್ಲಿದ್ದಾರೆ.

ಇನ್ನೇನು ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ಇನ್ನೊಂದು ಬೇರೆಯದೇ ಆದ ವಿಷಯಕ್ಕೆ ಇವರು ಸುದ್ದಿಯಾಗುತ್ತಾರೆ. ಈಗ ಇವತ್ತಷ್ಟೇ ವಿರಾಟ್ ಕೊಹ್ಲಿ ಅನುಷ್ಕಾಅವರನ್ನು ತಬ್ಬಿ ಹಿಡಿದುಕೊಂಡಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಇಂಟರ್ನೆಟ್‌ನಲ್ಲಿ ಸಂಚಲವನ್ನೇ ಮೂಡಿಸಿದೆ.
 
ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವ ಕೊಹ್ಲಿ ಈಗ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ-20 ಪಂದ್ಯಗಳನ್ನು ಆಡುತ್ತಿದ್ದಾರೆ. ಟಿ-20 ಗೂ ಮುನ್ನ ನಡೆದ ಏಕದಿನ ಪಂದ್ಯಗಳಲ್ಲಿ ಭಾರತ 5-1 ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಕೊಹ್ಲಿ 550 ಕ್ಕೂ ಅಧಿಕ ರನ್‌ಗಳನ್ನು ಕೇವಲ ಒಂದು ಸರಣಿಯಲ್ಲಿ ಕಲೆಹಾಕಿದ ವಿಶ್ವದ ಏಕೈಕ ಆಟಗಾರ ಎನ್ನುವ ಬಿರುದನ್ನು ತಮ್ಮದಾಗಿಸಿಕೊಂಡಿದ್ದರು. ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಸ್ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ ವಿರಾಟ್ "ಈ ಉತ್ತಮ ಪ್ರದರ್ಶನಕ್ಕೆ ನನಗೆ ಹತ್ತಿರವಿರುವ ವ್ಯಕ್ತಿಗಳೇ ಕಾರಣ, ಅವರಿಗೆ ಈ ಗೌರವ ಸಲ್ಲಬೇಕು. ನನ್ನ ಹೆಂಡತಿ ಈ ಪ್ರವಾಸದುದ್ದಕ್ಕೂ ನನ್ನನ್ನು ಪ್ರೋತ್ಸಾಹಿದ್ದಾಳೆ. ಅದಕ್ಕಾಗಿ ನಾನು ಆಭಾರಿಯಾಗಿದ್ದೇನೆ" ಎಂದು ಹೇಳುತ್ತಾ ತಮ್ಮ ಮುದ್ದಿನ ಮಡದಿಯನ್ನು ನೆನಪಿಸಿಕೊಂಡಿದ್ದರು. ಅದರ ಬೆನ್ನಲ್ಲೇ ವಿರಾಟ್ ಈಗ ಅನುಷ್ಕಾ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡಿರುವ ಫೋಟೋವೊಂದನ್ನು ಪೋಸ್ಟ್ ಮಾಡಿ, ಅದರಲ್ಲಿ "ಮೈ ಒನ್ ಎಂಡ್ ಓನ್ಲಿ" (ನನ್ನ ಏಕೈಕ) ಎಂದು ಬರೆದು ಅದರ ಮುಂದೆ ಎರಡು ಹೃದಯದ ಸ್ಟಿಕ್ಕರ್‌ಗಳನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಕೊಹ್ಲಿ ಪತ್ನಿಯಿಂದ ದೂರವಿದ್ದರೂ ಅವರಿಗಾಗಿ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
 
ಅನುಷ್ಕಾ ಕೂಡಾ ವಿರಾಟ್ ಅವರನ್ನು ಈ ಪ್ರವಾಸದುದ್ದಕ್ಕೂ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ವಿರಾಟ್ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಶತಕವನ್ನು ಗಳಿಸಿದಾಗಲೆಲ್ಲಾ ಅನುಷ್ಕಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಕೊಹ್ಲಿಯ ಫೋಟೋವನ್ನು ಹಾಕಿ ಕೊಹ್ಲಿಯ ಶತಕ ಮತ್ತು ತಂಡದ ಗೆಲುವಿಗೆ ಶುಭಾಶಯವನ್ನು ಕೋರುತ್ತಾ ಸಂತೋಷವನ್ನು ವ್ಯಕ್ತಪಡಿಸಿದ್ದರು. ಈಗ ಮೊದಲನೇ ಟಿ-20 ಪಂದ್ಯವನ್ನು ಗೆದ್ದು ನಾಳೆ ನಡೆಯಲಿರುವ ಎರಡನೇ ಟಿ-20 ಪಂದ್ಯದ ತಯಾರಿಯಲ್ಲಿರುವ ವಿರಾಟ್ ಉಳಿದೆರಡು ಟಿ-20 ಪಂದ್ಯಗಳನ್ನು ಮುಗಿಸಿ ಆದಷ್ಟು ಬೇಗ ತಮ್ಮ ಮಡದಿಯನ್ನು ಸೇರಿಕೊಳ್ಳುವ ಆತುರದಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹೊಟ್ಟೆಯಿಂದಾಗಿ ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ

ಲಂಡನ್ ನಲ್ಲಿದ್ದು ಹೀಗಾದ್ರಾ ವಿರಾಟ್ ಕೊಹ್ಲಿ, ಫೋಟೋ ನೋಡಿ ಶಾಕ್

ಇದನ್ನು ನಂಬಲು ಅಸಾಧ್ಯ, ಸಿರಾಜ್ ಪ್ರದರ್ಶನಕ್ಕೆ ಬೇಷ್ ಎಂದ ಕ್ರಿಕೆಟ್ ದೇವರು ಸಚಿನ್

ENG vs IND Test: ಭಾರತದ ಬೌಲರ್‌ಗಳ ವಿರುದ್ಧ ಗಂಭೀರ ಆರೋಪ ಎಸಗಿದ ಪಾಕ್‌ ವೇಗಿ

ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಗಿದ್ದರೂ ಕೆಎಲ್ ರಾಹುಲ್ ಗೆ ಹೀಗ್ಯಾಕೆ

ಮುಂದಿನ ಸುದ್ದಿ
Show comments