Daily Horoscope

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಗಾಗಿ ಕಾಯುತ್ತಿದೆ ಹೊಸ ದಾಖಲೆ!

Webdunia
ಬುಧವಾರ, 21 ಫೆಬ್ರವರಿ 2018 (08:31 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಮತ್ತೊಂದು ಗೆಲುವಿನೊಂದಿಗೆ ಸರಣಿ ತನ್ನದಾಗಿಸಿಕೊಳ್ಳಲು ಕೊಹ್ಲಿ ಬಳಗ ಸಜ್ಜಾಗಿದೆ.
 

ಸೆಂಚೂರಿಯನ್ ನಲ್ಲಿ ಈಗಾಗಲೇ ಅಂತಿಮ ಏಕದಿನ ಆಡಿ ಗೆದ್ದಿರುವ ಭಾರತ ಮತ್ತೊಂದು ಗೆಲುವು ದಾಖಲಿಸಲು ತುದಿಗಾಲಲ್ಲಿ ನಿಂತಿದೆ. ಅದ್ಭುತ ಫಾರ್ಮ್ ನಲ್ಲಿರುವ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯ ನಿರೀಕ್ಷೆಯಲ್ಲಿದ್ದಾರೆ.

ಟಿ20 ಮಾದರಿ ಕ್ರಿಕೆಟ್ ನಲ್ಲಿ 2000 ರನ್ ಪೂರೈಸಲು ಅವರಿಗೆ ಇನ್ನು 18 ರನ್ ಗಳ ಅಗತ್ಯವಿದೆ. ಅದು ಇದೇ ಪಂದ್ಯದಲ್ಲಿ ಪೂರೈಸಿಯಾರು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಭಾರತ ತಂಡದ ಬಗ್ಗೆ ಹೇಳಬೇಕಾದರೆ ಮಧ್ಯಮ ಕ್ರಮಾಂಕ ಇನ್ನೂ ಕ್ಲಿಕ್ ಆಗಿಲ್ಲ. ಬಹಳ ದಿನಗಳ ನಂತರ ತಂಡಕ್ಕೆ ಬಂದ ಸುರೇಶ್ ರೈನಾ ಹೆಚ್ಚೇನೂ ಕಡೆದು ಕಟ್ಟೆ ಹಾಕಿಲ್ಲ. ಹಾರ್ದಿಕ್ ಪಾಂಡ್ಯ ತಮ್ಮ ಎಂದಿನ ಮೊನಚು ಕಳೆದುಕೊಂಡಿದ್ದಾರೆ. ಇದ್ದವರಲ್ಲಿ ಕನ್ನಡಿಗ ಮನೀಶ್ ಪಾಂಡೆ ಪರವಾಗಿಲ್ಲ. ಧೋನಿಗೆ ಇನ್ನೂ ಅಂತಹ ಅವಕಾಶ ಸಿಕ್ಕಿಲ್ಲ.

ಬೌಲಿಂಗ್ ವಿಭಾಗವನ್ನು ಹೇಳುವಂತೆಯೇ ಇಲ್ಲ. ಟೀಂ ಇಂಡಿಯಾಗೆ ಸ್ಪಿನ್ನರ್ ಗಳೇ ಆಸ್ತಿ ಎಂದಾದರೂ ಕಳೆದ ಪಂದ್ಯದಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್, ಬುಮ್ರಾ ಕೊಂಚ ಹಿಡಿತದಲ್ಲಿ ರನ್ ಬಿಟ್ಟುಕೊಟ್ಟವರು. ಉಳಿದಂತೆ ಎಲ್ಲಾ ಬೌಲರ್ ಗಳೂ ಧಾರಾಳಿಯಾಗಿದ್ದರು.

ಹಾಗಿದ್ದರೂ ಇದು ಟಿ20 ಮಾದರಿ. ಇಲ್ಲಿ ಬೌಲರ್ ಗಳಿಗೆ ಚಚ್ಚಿಸಿಕೊಳ್ಳವುದೇ ಕೆಲಸ. ಹಾಗಿದ್ದರೂ ಇಂದಿನ ಪಂದ್ಯ ರಾತ್ರಿ ನಡೆಯುವುದಾದ ಕಾರಣ ಕಳೆದ ಪಂದ್ಯದ ಪರಿಸ್ಥಿತಿಯೇ ಇರಲಾರದು. ಅದೇನೇ ಇದ್ದರೂ ಸದ್ಯದ ಮಟ್ಟಿಗೆ ಭಾರತವೇ ಫೇವರಿಟ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೌಂಟಿ ಕ್ರಿಕೆಟ್‌ನಲ್ಲಿ ಜಾದೂ ಮಾಡಿದ ಕುಲದೀಪ್‌: ಭಾರತ ತಂಡದಿಂದ ನಿರ್ಲಕ್ಷಿಸಿದಕ್ಕೆ ಆಯ್ಕೆ ಮಂಡಳಿಗೆ ಸಂದೇಶ ರವಾನೆ

IND vs AFG: ಟೀಂ ಇಂಡಿಯಾ, ಅಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿ, ಲೈವ್ ಪ್ರಸಾರ ಎಲ್ಲಿ ಇಲ್ಲಿದೆ ವಿವರ

IND vs BAN: ಮಹಿಳಾ ಏಷ್ಯಾ ಕಪ್ ಫೈನಲ್ ಗೆ ಭಾರತ ತಂಡ: ಫೈನಲ್ ಯಾವಾಗ, ಎಷ್ಟನೇ ಬಾರಿ ಫೈನಲ್ ಪ್ರವೇಶಿಸುತ್ತಿದೆ ಇಲ್ಲಿದೆ ವಿವರ

IND vs BAN: ಮಹಿಳಾ ಏಷ್ಯಾ ಕಪ್ ಸೆಮಿಫೈನಲ್ ನಲ್ಲಿ ಭಾರತ ವರ್ಸಸ್ ಬಾಂಗ್ಲಾ: ಲೈವ್ ಇಲ್ಲಿ ವೀಕ್ಷಿಸಿ

ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತಕ್ಕೆ ನಾಳೆ ಬಾಂಗ್ಲಾದೇಶ ಸವಾಲು

ಮುಂದಿನ ಸುದ್ದಿ
Show comments