Publish Date: Tue, 21 Dec 2021 (09:00 IST)
Updated Date: Tue, 21 Dec 2021 (09:05 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಪ್ರೇಕ್ಷಕರು ಮೈದಾನಕ್ಕೆ ಬರಲು ಅವಕಾಶ ನೀಡಲಾಗಿಲ್ಲ.
ಆಫ್ರಿಕಾ ನಾಡಿನಲ್ಲಿ ಕೊರೋನಾ, ಒಮ್ರಿಕಾನ್ ವೈರಸ್ ಹಾವಳಿ ಜೋರಾಗಿದೆ. ಹೀಗಾಗಿ ಕ್ರಿಕೆಟಿಗರ ಹಿತದೃಷ್ಟಿಯಿಂದ ಅಲ್ಲಿನ ಕ್ರಿಕೆಟ್ ಮಂಡಳಿ ಪ್ರೇಕ್ಷಕರಿಲ್ಲದೇ ಟೆಸ್ಟ್ ಸರಣಿ ಆಯೋಜಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯ ಟಿಕೆಟ್ ಗಳನ್ನು ಮಾರಾಟಕ್ಕಿಡಲಾಗಿಲ್ಲ. ಇದರ ಅರ್ಥ ಪ್ರೇಕ್ಷಕರಿಗೆ ಅನುವು ಮಾಡಿಕೊಡಲಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಅಭಿಮಾನಿಗಳು ಟಿವಿ ಮೂಲಕವೇ ಪಂದ್ಯ ವೀಕ್ಷಿಸಬೇಕಾಗಿದೆ.