ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ನೇಮಕವಾದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಗೆ ಹೊಸ ಫಜೀತಿ ಎದುರಾಗಿದೆ.
ಇದೀಗ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಶೀತಲ ಸಮರ ನಡೆಯುತ್ತಿದ್ದು, ಅದು ತಂಡದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ಧಾರಿ ರಾಹುಲ್ ದ್ರಾವಿಡ್ ಹೆಗಲಿಗೇರಿದೆ.
ಮೊದಲೇ ಬಯೋಬಬಲ್ ವಾತಾವರಣ, ಬಿಡುವಿಲ್ಲದ ಕ್ರಿಕೆಟ್ ನಿಂದ ಕ್ರಿಕೆಟಿಗರು ಹೈರಾಣಾಗಿದ್ದಾರೆ. ಅದರ ನಡುವೆ ಈ ನಾಯಕತ್ವ ವಿವಾದ ಆಟದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವಿನ ತವಕದಲ್ಲಿರುವ ಟೀಂ ಇಂಡಿಯಾಕ್ಕೆ ಬಾಹ್ಯ ಒತ್ತಡಗಳು ಬಾರದಂತೆ ನೋಡಿಕೊಂಡು ಸರಿಯಾಗಿ ಮಾರ್ಗದರ್ಶನ ನೀಡುವ ಹೊಣೆ ರಾಹುಲ್ ದ್ರಾವಿಡ್ ಹೆಗಲಿಗೇರಿದೆ.