ನ್ಯೂಜಿಲೆಂಡ್: ಹೊಡಿಬಡಿ ಖ್ಯಾತಿಯ ಟಿ20 ಕ್ರಿಕೆಟ್‌ಗೆ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ  ಕೇನ್ ವಿಲಿಯಮ್ಸನ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 
 
									
			
			 
 			
 
 			
					
			        							
								
																	ಭಾನುವಾರ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿ ಪ್ರಾರಂಭವಾಗುವ ಕೆಲವು ದಿನಗಳ ಮೊದಲೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 35 ವರ್ಷದ ಕೇನ್ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಆಟಲಿದ್ದಾರೆ.
									
										
								
																	ನ್ಯೂಜಿಲೆಂಡ್ ಪರ 93 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್ ಅವರನ್ನು ಇತ್ತೀಚೆಗೆ 2026ರ ಋತುವಿಗಾಗಿ ಐಪಿಎಲ್ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್‌ನ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು.
									
											
							                     
							
							
			        							
								
																	ಟಿ20 ಕ್ರಿಕೆಟ್‌ನಲ್ಲಿ 2575 ರನ್ ಗಳಿಸಿದ್ದು, ಮುಂಬರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಮೂರು ಟೆಸ್ಟ್‌ಗಳ ಮೇಲೆ ಕೇಂದ್ರೀಕರಿಸಲು ವಿಲಿಯಮ್ಸನ್, ಏಕದಿನ ಸರಣಿಯಿಂದಲೂ ಸಹ ಹೊರಗುಳಿಯಲಿದ್ದಾರೆ.
									
			                     
							
							
			        							
								
																	ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ನ್ಯೂಜಿಲೆಂಡ್‌ನ ಎರಡನೇ ಆಟಗಾರನಾಗಿ ಅವರು ನಿವೃತ್ತರಾಗುತ್ತಿದ್ದಾರೆ. ಇದರಲ್ಲಿ 18 ಅರ್ಧಶತಕಗಳು ಮತ್ತು 95 ಗರಿಷ್ಠ ಮೊತ್ತ ಸೇರಿದೆ. ಎಲ್ಲ ಮಾದರಿಯ ಕ್ರಿಕೆಟ್‌ನಿಂದ 19,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.