Select Your Language

Notifications

webdunia
webdunia
webdunia
webdunia

ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿಗೆ ಈ ಕ್ರಿಕೆಟಿಗ ಮೊದಲ ಬಾರಿಗೆ ಕ್ಯಾಪ್ಟನ್ ಆಗಲಿದ್ದಾರೆ!

ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿಗೆ ಈ ಕ್ರಿಕೆಟಿಗ ಮೊದಲ ಬಾರಿಗೆ ಕ್ಯಾಪ್ಟನ್ ಆಗಲಿದ್ದಾರೆ!
ಮುಂಬೈ , ಬುಧವಾರ, 26 ಜುಲೈ 2023 (08:10 IST)
ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾಗೆ ಸರಣಿಗೊಬ್ಬ ನಾಯಕ ಎಂಬಂತಾಗಿದೆ. ಇದೀಗ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಮತ್ತೊಬ್ಬ ಹೊಸ ನಾಯಕನ ಹೆಸರು ಕೇಳಿಬರುತ್ತಿದೆ.

ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಮಾಡಬೇಕಾಗುತ್ತದೆ. ಇಲ್ಲಿಯೂ ಮೂರು ಪಂದ್ಯಗಳ ಕಿರು ಟಿ20 ಸರಣಿ ಆಡಲಿದೆ. ಈ ಸರಣಿಗೆ ಪ್ರಮುಖರು ವಿಶ್ರಾಂತಿ ಪಡೆಯಲಿದ್ದಾರೆ.

ಈ ಮೊದಲು ಹಾರ್ದಿಕ್ ಪಾಂಡ್ಯ ಈ ಸರಣಿಗೆ ನಾಯಕರಾಗಬಹುದು ಎನ್ನಲಾಗಿತ್ತು. ಆದರೆ ಹಾರ್ದಿಕ್ ಗೂ ವಿಶ್ರಾಂತಿ ನೀಡಲಿದ್ದು, ಸೂರ್ಯಕುಮಾರ್ ಯಾದವ್ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಳ್ಳುವ ಸಾಧ‍್ಯತೆಯಿದೆ. ಈಗಾಗಲೇ ಈ ಸರಣಿಯಿಂದ ಕೋಚ್ ರಾಹುಲ್ ದ್ರಾವಿಡ್ ಮತ್ತು ಬಳಗಕ್ಕೂ ವಿಶ್ರಾಂತಿ ನೀಡಲಾಗಿದ್ದು, ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್ ಏಕದಿನ ಸರಣಿಯಲ್ಲಿ ದಾಖಲೆ ಮಾಡಲಿದ್ದಾರೆ ರೋಹಿತ್ ಶರ್ಮಾ