ಪೋರ್ಟ್ ಆಫ್ ಸ್ಪೇನ್: ಅದ್ಬುತವಾಗಿ ಕೊನೆಗೊಳ್ಳಬೇಕಾಗಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮಳೆಯಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿದೆ. ಇದು ಟೀಂ ಇಂಡಿಯಾ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
ನಾಲ್ಕನೇ ದಿನದಂತ್ಯಕ್ಕೆ 365 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ವಿಂಡೀಸ್ ದ್ವಿತೀಯ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 76 ರನ್ ಗಳಿಸಿತ್ತು. ಅಂತಿಮ ದಿನ ಭಾರತ ಉಳಿದ 8 ವಿಕೆಟ್ ಗಳನ್ನು ಕಿತ್ತು ಗೆಲುವಿನ ಭರವಸೆಯಲ್ಲಿತ್ತು. ಆದರೆ ನಿನ್ನೆ ದಿನವಿಡೀ ಸುರಿದ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ಪಂದ್ಯ ರದ್ದಾಯಿತು.
ಇದರಿಂದಾಗಿ ದ್ವಿತೀಯ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಇದರೊಂದಿಗೆ ಟೀಂ ಇಂಡಿಯಾ 1-0 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿತು. ಆದರೆ ಅಸಮಾಧಾನಗೊಂಡ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನು ಮುಂದೆ ಮಳೆ ಬರದ ತಟಸ್ಥ ಸ್ಥಳಗಳಲ್ಲಿ ಪಂದ್ಯ ಆಯೋಜಿಸಬೇಕು. ಮೈದಾನಕ್ಕೆ ಛಾವಣಿ ವ್ಯವಸ್ಥೆ ಮಾಡಬೇಕು ಮತ್ತು ಮೀಸಲು ದಿನ ಇಡಬೇಕು ಎಂದು ಆಗ್ರಹಿಸಿದ್ದಾರೆ.