ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮುಂಬರುವ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಹತ್ವದ ದಾಖಲೆಯೊಂದನ್ನು ಮಾಡಲಿದ್ದಾರೆ.
ಟೆಸ್ಟ್ ಸರಣಿಯಲ್ಲಿ ಒಂದು ಶತಕ ಎರಡು ಅರ್ಧಶತಕ ಸೇರಿದಂತೆ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದ ಹಿಟ್ ಮ್ಯಾನ್ ಏಕದಿನ ಸರಣಿಯಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ.
ಸದ್ಯಕ್ಕೆ ಏಕದಿನ ಕ್ರಿಕೆಟ್ ನಲ್ಲಿ 9825 ರನ್ ಗಳಿಸಿರುವ ರೋಹಿತ್ ಶರ್ಮಾ ಇನ್ನು 175 ರನ್ ಗಳಿಸಿದರೆ ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಕ್ರಿಕೆಟಿಗರ ಪಟ್ಟಿ ಸೇರಲಿದ್ದಾರೆ. ಸದ್ಯಕ್ಕೆ 243 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್ 30 ಶತಕ 48 ಅರ್ಧಶತಕ ಸಿಡಿಸಿದ್ದಾರೆ. ಅಲ್ಲದೆ, ಇನ್ನು 193 ರನ್ ಗಳಿಸಿದರೆ ಆರಂಭಿಕರಾಗಿ 8000 ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ.