ದುಬೈ: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಸಂದರ್ಭದಲ್ಲಿ ದಿನವಿಡೀ ಉಪವಾಸ ವ್ರತ ಮಾಡಬೇಕಾಗುತ್ತದೆ. ಆದರೆ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ದೇಶಕ್ಕಾಗಿ ರಂಜಾನ್ ಉಪವಾಸವನ್ನೂ ಕೈ ಬಿಟ್ಟಿದ್ದಾರೆ.
ಮೊಹಮ್ಮದ್ ಶಮಿ ಕೂಡಾ ಮೂಲತಃ ಇಸ್ಲಾಂ ಧರ್ಮದವರು. ತಮ್ಮ ಧಾರ್ಮಿಕ ಆಚರಣೆಗಳನ್ನು ಅವರು ತಪ್ಪದೇ ನಿರ್ವಹಿಸುತ್ತಾರೆ. ಆದರೆ ನಿನ್ನೆಯ ಪಂದ್ಯದಲ್ಲಿ ಅವರ ವರ್ತನೆಯೊಂದು ದೇಶಕ್ಕಾಗಿ ರಂಜಾನ್ ಉಪವಾಸವನ್ನೂ ಕೈ ಬಿಟ್ಟಿದ್ದಾರೆ ಎನ್ನುವುದು ಬಹಿರಂಗವಾಗಿದೆ.
ರಂಜಾನ್ ಉಪವಾಸದ ಸಂದರ್ಭದಲ್ಲಿ ಪಾನೀಯವನ್ನೂ ಸೇರಿಸುವಂತಿಲ್ಲ. ಆದರೆ ನಿನ್ನೆಯ ಪಂದ್ಯದ ವೇಳೆ ಮೊಹಮ್ಮದ್ ಶಮಿ ಮೈದಾನದಲ್ಲಿ ಜ್ಯೂಸ್ ಸೇವನೆ ಮಾಡುವುದು ಕಣ್ಣಿಗೆ ಬಿದ್ದಿದೆ. ಒಬ್ಬ ಕ್ರೀಡಾಪಟುವಾಗಿ ಆಡುವಾಗ ನೀರೂ ಕೂಡಾ ಸೇವಿಸದೇ ಉಪವಾಸವಿದ್ದು ಆಡುವುದು ಕಷ್ಟ.
ಆದರೆ ಶಮಿ ಆಡುವುದು ತಂಡಕ್ಕೆ ಅತೀ ಅಗತ್ಯ. ಈ ಕಾರಣಕ್ಕೆ ರಂಜಾನ್ ಉಪವಾಸವನ್ನೂ ಬದಿಗಿಟ್ಟು ದೇಶಕ್ಕಾಗಿ ಆಡಿದ್ದಾರೆ. ಈ ಫೋಟೋಗಳನ್ನ ನೋಡಿ ಅಭಿಮಾನಿಗಳು ವಿ ಲವ್ ಯೂ ಶಮಿ ಭಾಯಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.