Publish Date: Fri, 16 Dec 2022 (08:40 IST)
Updated Date: Fri, 16 Dec 2022 (08:55 IST)
ಚಿತ್ತಗಾಂಗ್: ಮೈದಾನದಲ್ಲಿ ಆಕ್ರಮಣಕಾರೀ ವರ್ತನೆ ತೋರುವುದರಲ್ಲಿ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ನಿಸ್ಸೀಮರು. ಇದನ್ನೇ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಬ್ಬರೂ ಎದುರಾಳಿ ಬ್ಯಾಟಿಗನಿಗೆ ತೋರಿಸಿಕೊಟ್ಟಿದ್ದಾರೆ.
ಬಾಂಗ್ಲಾ ಬ್ಯಾಟಿಗ ಲಿಟನ್ ದಾಸ್ ಬೌಲಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಕಡೆಗೆ ಕೇಳಿಸಿಲ್ಲ ಎಂಬಂತೆ ಕಿವಿ ಸನ್ನೆ ಮಾಡಿ ಕೆಣಕಿದ್ದಾರೆ. ಆಗ ಮೊಹಮ್ಮದ್ ಸಿರಾಜ್ ಸುಮ್ಮನಿದ್ದರು.
ಮರು ಎಸೆತದಲ್ಲೇ ಲಿಟನ್ ದಾಸ್ ರನ್ನು ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದ್ದರು. ಬಳಿಕ ಸಿರಾಜ್ ಹಾಗೂ ಪಕ್ಕದಲ್ಲೇ ಇದ್ದ ವಿರಾಟ್ ಕೊಹ್ಲಿ ಲಿಟನ್ ರಂತೇ ಕೈ ಸನ್ನೆ ಮಾಡಿ ಸೆಂಡ್ ಆಫ್ ಮಾಡಿದ್ದಾರೆ. ಕೆಣಕಿದವರನ್ನು ಸುಮ್ಮನೇ ಬಿಡುವ ಜಾಯಮಾನದವರೇ ತಾವಲ್ಲ ಎಂಬುದನ್ನು ಇಬ್ಬರೂ ನಿರೂಪಿಸಿದ್ದಾರೆ.