Webdunia - Bharat's app for daily news and videos

Install App

ನಾಚಿಕೆಯಾಗ್ಬೇಕು ನಿಮಗೆ! ಪಾಕಿಸ್ತಾನದ ಹಸನ್ ರಾಜಾಗೆ ಮೊಹಮ್ಮದ್ ಶಮಿ ತಪರಾಕಿ

Webdunia
ಬುಧವಾರ, 8 ನವೆಂಬರ್ 2023 (17:12 IST)
ಬೆಂಗಳೂರು: ಈ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಬೇರೆಯೇ ಬಾಲ್ ನೀಡಲಾಗುತ್ತಿದೆ ಎಂಬ ಪಾಕಿಸ್ತಾನದ ಹಸನ್ ರಾಜಾ ಆರೋಪಕ್ಕೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಪರಾಕಿ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ಹಸನ್ ರಾಜಾ ಟಿವಿ ವಾಹಿನಿಯೊಂದರ ಚರ್ಚೆ ವೇಳೆ ಇಂತಹದ್ದೊಂದು ಆ‍ಧಾರರಹಿತ ಆರೋಪ ಮಾಡಿದ್ದರು. ಈ ಬಗ್ಗೆ ಸ್ವತಃ ಪಾಕಿಸ್ತಾನದವರೇ ಆದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ಭಾರತೀಯ ವೇಗಿ ಮೊಹಮ್ಮದ್ ಶಮಿ ಇನ್ ಸ್ಟಾಗ್ರಾಂ ಮೂಲಕ ಪಾಕ್ ಮಾಜಿ ಕ್ರಿಕೆಟಿಗನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ನಾಚಿಕೆಯಾಗಬೇಕು ನಿಮಗೆ. ಮೊದಲು ನಿಮ್ಮ ಪ್ರದರ್ಶನ ಸುಧಾರಿಸುವತ್ತ ಗಮನ ಹರಿಸಿ. ಇಲ್ಲದೇ ಹೋದರೆ ಇನ್ನೊಬ್ಬರ ಯಶಸ್ಸನ್ನು ನೋಡಿ ಖುಷಿಪಡುವ ಮನೋಭಾವ ಬೆಳೆಸಿಕೊಳ್ಳಿ. ನೀವೂ ಕೂಡಾ ಆಟಗಾರರಾಗಿದ್ದರಲ್ಲವೇ? ವಾಸಿಂ ಭಾಯಿ ವಿವರಿಸಿದ ಮೇಲೂ ಇಂತಹ ಹೇಳಿಕೆ ನೀಡುತ್ತಿದ್ದೀರಾ? ನಿಮ್ಮದೇ ದೇಶದ ಆಟಗಾರ ವಾಸಿಂ ಅಕ್ರಮ್ ಬಗ್ಗೆಯೇ ವಿಶ್ವಾಸವಿಲ್ಲವೇ? ಭಾರತ ಮೋಸ ಮಾಡುತ್ತಿದೆಯಾ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ಶಾಕ್‌: ಟೀಮ್‌ನಿಂದ ಜಸ್‌ಪ್ರೀತ್‌ ಬೂಮ್ರಾ ಔಟ್‌?

ತಿರುಪತಿಯಲ್ಲಿ ಮುಡಿ ಅರ್ಪಿಸಿದ ಹಾರ್ದಿಕ್ ಪಾಂಡ್ಯ, ಸಾಲು ಸಾಲು ಸೋಲು, ಅವಮಾನಗಳ ನಡುವೆ ಕುತೂಹಲ ಮೂಡಿಸಿದ ದೇವಸ್ಥಾನ ಭೇಟಿ

ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಡಬಲ್‌ ಪದಕ: ಸೂಪರ್‌ ಸ್ಟಾರ್‌ ನೀರಜ್‌ ಚೋಪ್ರಾಗೆ ಸಿಕ್ಕಿದ್ದೇನು ಗೊತ್ತಾ

ಕಾಮನ್‌ವೆಲ್ತ್‌ ಗೇಮ್ಸ್‌, ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಫೈನಲ್‌

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಜಿಂಕ್ಯಾ ರೆಹಾನೆ

ಮುಂದಿನ ಸುದ್ದಿ
Show comments